ಹಾಸನ: ಏಪ್ರಿಲ್ ನಂತರ ಲಾಕ್ಡೌನ್ ಮುಗಿದಾಕ್ಷಣ ಕೊರೋನಾ ನಿಯಂತ್ರಣ ಆಗುವುದಿಲ್ಲ. ಈ ಕಾಯಿಲೆಯ ಹಣೆಬರಹವೇ ಇಷ್ಟು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು.
ಪ್ರಧಾನಿಗಳು ಮುನ್ನೆಚ್ಚರಿಕಾ ಕ್ರಮವನ್ನು ಸರಿಯಾದ ಸಮಯಕ್ಕೆ ತೆಗೆದುಕೊಂಡರು. ಕೊರೋನಾ ವೈರಸ್ ವೇಗವಾಗಿ ಹರಡುವುದನ್ನು ತಡೆದರು. ಇದು ಮೆಚ್ಚುವಂತದ್ದು. ಆದರೆ ರೈತರ ಪರಿಸ್ಥಿತಿ ನೋಡಿದರೆ ಆತಂಕವಾಗುತ್ತದೆ ಎಂದರು.
ಪ್ರಧಾನಮಂತ್ರಿಗೆ ಪತ್ರ ಬರೆಯಬೇಕು. ಅದಕ್ಕೂ ಮೊದಲು ಸರ್ಕಾರದ ವೈಫಲ್ಯ ಪಟ್ಟಿ ಮಾಡಬೇಕು. ಕೇಂದ್ರ ಹೇಳಿದ್ದೇನು, ಇಲ್ಲಿನ ರಾಜ್ಯ ಮಾಡಿದ್ದೇನು ಎಂದು ಗಮನಿಸಿಕೊಳ್ಳಬೇಕು ಎಂದಿದ್ದಾರೆ.
ಪ್ರಧಾನಮಂತ್ರಿ ಒಬ್ಬರೇ ಎಲ್ಲ ಕೆಲಸ ಮಾಡಲು ಸಾಧ್ಯವಿಲ್ಲ. ಅವರ ಸಚಿವರ ತಂಡ ಶ್ರಮಿಸಬೇಕು. ರೈತರು ತಾಳ್ಮೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ನಾನು ಮಾತನಾಡಿಸಲು ಹೋದರೆ ನನ್ನ ಮೇಲೆ ರೇಗಿದರು. ಮುಖ್ಯಮಂತ್ರಿ ಕೂಡ ನಿನ್ನೆ ಹಲವು ಕಡೆ ನಡೆದು ಹೋಗಿ ಪರಿಸ್ಥಿತಿ ಅವಲೋಕನ ಮಾಡಿದರು. ಆದರೇನು ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ. ಈಗ ರಾಜಕೀಯ ಮಾಡೋ ಸನ್ನಿವೇಶ ಇಲ್ಲ ಎಂದರು.