ಮೈಸೂರು: ಕೊರೋನಾ ವೈರಸ್ ಸೋಂಕಿತ ಮತ್ತೊಬ್ಬ ವ್ಯಕ್ತಿ ಸಂಪೂರ್ಣವಾಗಿ ಗುಣಮುಖನಾಗಿದ್ದು, ಆತನನನ್ನು ಮೈಸೂರಿನ ಕೋವಿಡ್ ಆಸ್ಪತ್ರೆಯಿಂದ ಸೋಮವಾರ ಬಿಡುಗಡೆ ಮಾಡಲಾಯಿತು.
ಮೈಸೂರಿನ ಕುವೆಂಪುನಗರದ ನಿವಾಸಿಯಾದ ಎನ್.ಮನು (35) ವರ್ಷ ಸೋಂಕಿನಿಂದ ಬಿಡುಗಡೆಯಾದವ. ಕಡಕೊಳ ಗ್ರಾಮದಲ್ಲಿರುವ ಜುಬಿಲಿಯಂಟ್ ಔಷಧ ಕಾರ್ಖಾನೆಯ ನೌಕರನಾದ ಈತನಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಬಹಳ ಬೇಗನೆ ಚೇತರಿಸಿಕೊಂಡು, ಗುಣಮುಖನಾದ, ನಡೆಸಿದ ಮತ್ತೊಂದು ಪರೀಕ್ಷೆಯಲ್ಲಿ ನೆಗಟಿವ್ ವರದಿ ಬಂದ ಕಾರಣ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇದರಿಂದಾಗಿ ಕೊರೋನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಮತ್ತಷ್ಟು ಜನರು ಬಿಡುಗಡೆ ಸಾಧ್ಯತೆ: ಕೊರೋನಾ ಸೋಂಕಿತರಲ್ಲಿ ಬಹಳಷ್ಟು ಮಂದಿ ಚೇತರಿಸಿಕೊಂಡು, ಗುಣಮುಖರಾಗುತ್ತಿದ್ದಾರೆ. ಇವರಲ್ಲಿ ವೃದ್ಧರೂ ಕೂಡ ಇದ್ದಾರೆ. ಅವರ ಆರೋಗ್ಯ ಕೂಡ ಇದೀಗ ಚೆನ್ನಾಗಿಯೇ ಇದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಮತ್ತೊಂದು ಬಾರಿ ಪರೀಕ್ಷೆ ನಡೆಸಿ, ನೆಗಟಿವ್ ವರದಿ ಬಂದ ಬಳಿಕ ಬಿಡುಗಡೆ ಮಾಡಲಾಗುತ್ತದೆ.