ಬೆಂಗಳೂರು: ಕೇಂದ್ರ ಸರ್ಕಾರ ಏ.೧೪ ರವರೆಗೆ ದೇಶಾದ್ಯಂತ ಘೋಷಿಸಿದ್ದ ಲಾಕ್‌ಡೌನ್ ಅವ ಮುಕ್ತಾಯಗೊಳ್ಳಲು ಕೇವಲ ನಾಲ್ಕೈದು ದಿನಗಳು ಬಾಕಿಯಿದ್ದು, ದೇಶದ ಹಲವು ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಏ.೧೪ರ ನಂತರವೂ ಲಾಕ್‌ಡೌನ್ ಅವ ಮುಂದುವರಿಯಲಿದೆಯೇ ಇಲ್ಲವೇ ಎಂಬ ಚರ್ಚೆ ಶುರುವಾಗಿದೆ.
ಕಳೆದ ೧೪ ದಿನಗಳಿಂದ ಕಟ್ಟುನಿಟ್ಟಾಗಿ ಲಾಕ್‌ಡೌನ್ ಪಾಲಿಸಿದ ಮಂದಿ ಒಂದೆಡೆಯಾದರೆ, ರಾಜಾರೋಷವಾಗಿ ತಿರುಗಾಡಿದವರೂ ಇzರೆ. ಅಲ್ಲದೆ, ಹಲವು ಜಿಗಳಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, ಇಂತಹ ಜಿಗಳು ಸಂಪೂರ್ಣ ಸೀಲ್ ಡೌನ್ ಆಗಲಿದೆಯೇ ಎಂಬ ಆತಂಕ ಶುರುವಾಗಿದೆ. ಉಳಿದ ಜಿಗಳಲ್ಲಿ ಲಾಕ್‌ಡೌನ್ ಕೊಂಚ ಸಡಿಲಗೊಳ್ಳಬಹುದು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಡಾ.ಮಂಜುನಾಥ್, ಡಾ.ದೇವಿಶೆಟ್ಟಿ ಸೇರಿದಂತೆ ಹಲವರನ್ನೊಳಗೊಂಡ ತಜ್ಞರ ಸಮಿತಿಯೂ ಇದೇ ಮಾದರಿಯ ಶಿಫಾರಸು ಮಾಡಿದ್ದು, ಗುರುವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ.
ಸಿಎಂಗಳ ಜೊತೆ ಪಿಎಂ ಸಭೆ ಇಂದು
ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಏ.೧೧ ರ ಶನಿವಾರ ವೀಡಿಯೋ ಸಂವಾದ ನಡೆಸಲಿದ್ದು, ಕರ್ನಾಟಕದಲ್ಲಿ ಲಾಕ್‌ಡೌನ್ ಮುಂದುವರಿಸಬೇಕೇ ಎಂಬುದರ ಸ್ಪಷ್ಟ ನಿರ್ಣಯವು ಈ ಸಂದರ್ಭದಲ್ಲಿ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಪಡಿತರ ವಿತರಣೆಗಿಲ್ಲ ಅಡ್ಡಿ
ಎಲ್ಲಾ ಜಿಲ್ಲೆಗಳಲ್ಲಿ ಪಡಿತರ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ನಡೆಸಲು ಸೂಚಿಸಲಾಗಿದೆ. ಈಗಾಗಲೇ ಶೇ.೫೦ರಷ್ಟು ಪಡಿತರ ವಿತರಣೆ ಮಾಡಲಾಗಿದ್ದು, ಇನ್ನುಳಿದ ಪಡಿತರ ವಿತರಣೆಯನ್ನು ಇನ್ನು ಎರಡು ಮೂರು ದಿನಗಳಲ್ಲಿ ಪೂರ್ಣಗೊಳಿಸಲಾಗುವುದು.
ಸುಮಾರು ೨.೫೦ ಲಕ್ಷ ಕುಟುಂಬದವರಿಗೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದರೂ ವಿವಿಧ ಕಾರಣಗಳಿಗೆ ಸಿಕ್ಕಿಲ್ಲವೆಂದು ದೂರು ಬಂದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಹಾಗೂ ಸದ್ಯ ಅವರಿಗೆ ತಾತ್ಕಾಲಿಕವಾಗಿ ಪಡಿತರ ವ್ಯವಸ್ಥೆ ಮಾಡುವಂತೆ ಅಕಾರಿಗಳಿಗೆ ಸೂಚಿಸಲಾಗಿದೆ.
ಶಾಸಕ, ಸಚಿವರ ಶೇ.೩೦ ರಷ್ಟು ವೇತನ ಕಡಿತ
ಕೊರೋನಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಗೆ ಶಾಸಕರು ಮತ್ತು ಸಚಿವರ ವೇತನದಲ್ಲಿ ಶೇ.೩೦ ರಷ್ಟನ್ನ ಸಮರ್ಪಣೆ ಮಾಡಲು ಸಂಪುಟ ಸಭೆ ತೀರ್ಮಾನ ತೆಗೆದು ಕೊಂಡಿದೆ. ಅಂದರೆ, ೧೫.೩೬ ಕೋಟಿ ರೂ. ಮೊತ್ತವನ್ನ ಕೋವಿಡ್ ಪರಿಹಾರ ನಿಗೆ ನೀಡಲು ಸುಗ್ರೀವಾe ಮೂಲಕ ನಿರ್ಣಯಿಸಲಾಗಿದೆ.
ಇನ್ನು ಕೆಲವು ಜಿಗಳಿಗೆ ಉಸ್ತುವಾರಿ ಸಚಿವರ ನೇಮಕ ಆಗಿಲ್ಲ. ಅಂತಹ ಜಿಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಕ್ರಮ ಆಗಬೇಕಿದ್ದು, ಸರ್ಕಾರ ಕಾರ್ಯಚಟುವಟಿಕೆಗಳ ಉಸ್ತುವಾರಿಯೂ ನಡೆಯಬೇಕಿದೆ. ಹೀಗಾಗಿ ಜಿ ಉಸ್ತುವಾರಿ ಸಚಿವರುಗಳ ನೇಮಕ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಏನಿದು ಸೀಲ್ ಡೌನ್ ?
ಇಷ್ಟು ದಿನ ನಿಷೇಧಾe ಹೇರುವ ಮೂಲಕ ಲಾಕ್‌ಡೌನ್ ಮಾಡಲಾಗಿತ್ತು. ಐದಕ್ಕಿಂತ ಹೆಚ್ಚು ಜನರು ಗುಂಪುಗೂಡುವಂತಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಅನಿವಾರ್ಯ ಇದ್ದರಷ್ಟೇ ಮನೆಯಿಂದ ಹೊರಬೇಕು ಎಂಬ ಷರತ್ತುಗಳನ್ನ ವಿಸಿ, ಕೆಲವೆಡೆ ಲಾಕ್‌ಡೌನ್ ಸಡಿಲ ಮಾಡಲಾಗಿತ್ತು. ಆದರೆ, ಸೀಲ್ ಡೌನ್ ಹೀಗಲ್ಲ. ಇದು ಲಾಕ್‌ಡೌನ್‌ನ ಮುಂದಿನ ಕಠಿಣ ಹಂತ. ಈಗಾಗಲೇ ಕೆಲ ರಾಜ್ಯಗಳಲ್ಲಿ ಸೀಲ್ ಡೌನ್ ಜಾರಿಯಲ್ಲಿದ್ದು, ಕರ್ನಾಟಕದಲ್ಲೂ ಜಾರಿಯಾದರೆ ಅಚ್ಚರಿಯಿಲ್ಲ. ಕೊರೋನಾ ಸೋಂಕಿನಿಂದ ಮೃತಪಟ್ಟವರು ಹಾಗೂ ಸೋಂಕಿತರ ಸಂಖ್ಯೆ ಹೆಚ್ಚಿರುವಂತಹ ಪ್ರದೇಶಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗುತ್ತದೆ. ಇಂತಹ ಹಾಟ್‌ಸ್ಪಾಟ್‌ಗಳು ಏ.೧೪ ರ ನಂತರ ಸೀಲ್‌ಡೌನ್‌ಗೆ ಒಳಗಾಗಲಿವೆ. ಅಂದರೆ, ಅಗತ್ಯ ವಸ್ತುಗಳಿಗೂ ಯಾರೂ ಮನೆಯಿಂದ ಹೊರ ಬರುವಂತಿಲ್ಲ. ಹಾಟ್‌ಸ್ಪಾಟ್‌ನಿಂದ ಯಾರೂ ಹೊರಹೋಗುವಂತಿಲ್ಲ, ಯಾರೂ ಒಳಬರುವಂತಿಲ್ಲ. ದಿಗ್ಬಂಧನದ ಮಾದರಿಯಲ್ಲಿ ಇರಲಿದೆ. ಆಂಬುಲೆನ್ಸ್ , ಪೊಲೀಸ್ ವಾಹನ, ಅಗತ್ಯ ವಸ್ತು ಪೂರೈಸುವ ಆಯ್ದ ಕೆಲವೇ ವಾಹನ ಬಿಟ್ಟು ಮತ್ಯಾವ ವಾಹನ, ಜನ ರಸ್ತೆಯಲ್ಲಿ ಕಾಣಿಸುವಂತಿಲ್ಲ
ಸಂಪುಟದ ಇತರೆ ನಿರ್ಣಯ
* ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) – ೨೦೨೦ಕ್ಕೆ ಅನುಮೋದನೆ
* ಕರ್ನಾಟಕ ಭೂ ಕಬಳಿಕೆ ನಿಷೇಧ (ತಿದ್ದುಪಡಿ) ಆದ್ಯಾದೇಶ ೨೦೨೦ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ