ಜೆರುಸಲೇಂ: ಕೊರೋನಾ ತೊಲಗಿಸಲು ಸದ್ಯಕ್ಕೆ ಪರಿಣಾಮಕಾರಿಯಾಗಿರುವ ಮಲೇರಿಯಾಗೆ ನೀಡುವ ಹೈಡ್ರಾಕ್ಸಿಕ್ಲೋರೋಕ್ವೈನ್ ಔಷಧ ಸೇರಿದಂತೆ 5 ಟನ್ನಷ್ಟು ಔಷಧಗಳನ್ನು ರಫ್ತು ಮಾಡಿದ್ದಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ನನ್ನ ಪ್ರಿಯ ಗೆಳೆಯ ನರೇಂದ್ರ ಮೋದಿ, ಇಸ್ರೇಲ್ಗೆ ಔಷಧ ಕಳುಹಿಸಿದ್ದಕ್ಕಾಗಿ ಧನ್ಯವಾದಗಳು . ಇಸ್ರೇಲ್ನ ಎಲ್ಲ ನಾಗರಿಕರು ನಿಮಗೆ ಚಿರಋಣಿಯಾಗಿರುತ್ತಾರೆ ಎಂದು ನೆತನ್ಯಾಹು ಟ್ವೀಟ್ ಮಾಡಿದ್ದಾರೆ.
ಮಂಗಳವಾರ ಮಲೇರಿಯಾಗೆ ಬಳಸಲಾಗುವ ಔಷಧಗಳನ್ನು ಕೊರೋನಾ ವೈರಸ್ ರೋಗಿಗಳು ನೀಡಲು ಭಾರತದಿಂದ ವಿಮಾನದ ಮೂಲಕ ಕಳುಹಿಸಲಾಗಿತ್ತು. ಐದು ಟನ್ ಔಷಧಗಳು ಕ್ಲೋರೊಕ್ವೈನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವೈನ್ ಔಷಧ ತಯಾರಿಕೆ ಬೇಕಾಗುವ ಔಷಧ ಸಾಮಗ್ರಿಗಳನ್ನೂ ಒಳಗೊಂಡಿದ್ದವು.
ಏಪ್ರಿಲ್ 3ರಂದು ನೆತನ್ಯಾಹು ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿ ಹೈಡ್ರಾಕ್ಸಿಕ್ಲೋರೋಕ್ವೈನ್ ಔಷಧ ಕಳುಹಿಸುವಂತೆ ಮನವಿ ಮಾಡಿದ್ದರು.