ಹೊಸದಿಲ್ಲಿ: ದೇಶದಲ್ಲಿ ದಿನೇದಿನೆ ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ, ಹಲವು ತಜ್ಞರ ಸಲಹೆ, ಬಹುತೇಕ ರಾಜ್ಯಗಳ ಮನವಿ ಹಾಗೂ ಪ್ರಸ್ತುತದ ಪರಿಸ್ಥಿತಿ ಅವಲೋಕಿಸಿರುವ ಪ್ರಧಾನಿ ನರೇಂದ್ರ ಮೋದಿ, ಏಪ್ರಿಲ್ ೧೪ರ ಬಳಿಕವೂ ಲಾಕ್ಡೌನ್ ಮುಂದುವರಿಸುವುದೇ ಔಚಿತ್ಯ ಎಂದು ತಿಳಿಸಿದ್ದಾರೆ.
ವೀಡಿಯೋ ಕಾನರೆನ್ಸ್ ಮೂಲಕವೇ ಸರ್ವಪಕ್ಷಗಳ ಸಭೆ ನಡೆಸಿದ ಪ್ರಧಾನಿ, ದೇಶದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತದೆ. ಹಾಗಾಗಿ ಏಕಾಏಕಿ ಲಾಕ್ಡೌನ್ನ ಎಲ್ಲ ನಿಯಮ ಸಡಿಲಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಸರ್ವಪಕ್ಷಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜು ಜನತಾ ದಳ ನಾಯಕ ಪಿನಾಕಿ ಮಿಶ್ರಾ, ಪ್ರಸ್ತುತದ ಸ್ಥಿತಿ ನೋಡಿದರೆ ಲಾಕ್ಡೌನ್ ತೆರವುಗೊಳಿಸಲು ಆಗುವುದಿಲ್ಲ ಎಂಬುದನ್ನು ಮೋದಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಲಾಕ್ಡೌನ್ನ ಪರಿಣಾಮಗಳ ಕುರಿತು ಸಹ ನರೇಂದ್ರ ಮೋದಿ ಉಲ್ಲೇಖಿಸಿದ್ದು, ನಿರ್ಬಂಧದ ಬಳಿಕ ನಮ್ಮ ಜೀವನ ಸಂಪೂರ್ಣವಾಗಿ ಲಯಕ್ಕೆ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಲಾಕ್ಡೌನ್ ಮೊದಲು ಹಾಗೂ ಲಾಕ್ಡೌನ್ ನಂತರ ಎಂದು ಜನ ಜೀವನವನ್ನು ವಿಶ್ಲೇಷಿಸುತ್ತಾರೆ. ಸಾಮಾಜಿಕ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಸೋಂಕಿತರ ಸಂಖ್ಯೆ ಐದು ಸಾವಿರ ದಾಟಿದ್ದು, ತೆಲಂಗಾಣ, ರಾಜಸ್ಥಾನ, ಪುದುಚೇರಿ, ಮಹಾರಾಷ್ಟ್ರ, ಜಾರ್ಖಂಡ್, ಛತ್ತೀಸ್ಗಢ ಸೇರಿ ಹಲವು ರಾಜ್ಯಗಳು ಲಾಕ್ಡೌನ್ ಮುಂದುವರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ. ಅಲ್ಲದೆ, ಹಲವು ತಜ್ಞರು ಸಹ ಲಾಕ್ಡೌನ್ ಮುಂದುವರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಲಾಕ್ಡೌನ್ ಒಂದೇ ಪರಿಹಾರ:
ಕೊರೋನಾ ಪರಿಸ್ಥಿತಿ ಅರಿತ ನರೇಂದ್ರ ಮೋದಿ ಅವರು, ನಮ್ಮ ಜೀವ, ಜೀವನ ಉಳಿಸಿಕೊಳ್ಳಲು ಲಾಕ್ಡೌನ್ ಒಂದೇ ಪರಿಹಾರ ಎಂದು ಸರ್ವಪಕ್ಷಗಳ ಸದಸ್ಯರಿಗೆ ಮನವರಿಕೆ ಮಾಡಿದ್ದಾರೆ. ನಿತ್ಯ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ತಜ್ಞರು, ಅಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇನೆ.
ಯಾರೊಬ್ಬರೂ ಲಾಕ್ಡೌನ್ ತೆರವುಗೊಳಿಸಿ ಎಂದು ಹೇಳಿಲ್ಲ. ಹಾಗಾಗಿ ನಾವು ಮತ್ತಷ್ಟು ಜವಾಬ್ದಾರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.
ಏ.೧೧ಕ್ಕೆ ಸಿಎಂಗಳ ಜತೆ ಚರ್ಚೆ:
ಹೊಸದಿಲ್ಲಿ: ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಸಂವಹನ ನಡೆಸಲಿದ್ದು, ಲಾಕ್ಡೌನ್ ಸೇರಿದಂತೆ ಕೊರೋನಾ ವೈರಸ್ ಕುರಿತ ಹಲವು ವಿಷಯಗಳನ್ನು ಚರ್ಚಿಸಲಿದ್ದಾರೆ ಎಂದು ಅಕಾರಿ ಮೂಲಗಳು ಬುಧವಾರ ತಿಳಿಸಿವೆ. ಏತನ್ಮಧ್ಯೆ ಹಲವು ರಾಜ್ಯ ಸರ್ಕಾರಗಳು ಮತ್ತು ತಜ್ಞರು ಲಾಕ್ಡೌನ್ ಅವ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.