ಬೆಂಗಳೂರು, ಏ.8- ಪೊಲೀಸರ ಕಣ್ತಪ್ಪಿಸಿ ಹೊರಗಡೆ ಸುತ್ತಾಡದಿರಿ. ಒಂದು ವೇಳೆ ಅನಗತ್ಯವಾಗಿ ರಸ್ತೆಯಲ್ಲಿ ಸಂಚರಿಸಿದರೆ ಅವರ ವಿರುದ್ಧ ಪ್ರಕರಣ ದಾಖಲಾಗುವುದು ಖಚಿತ.
ಲಾಕ್ಡೌನ್ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಯಲ್ಲಿ ಸಂಚರಿಸುವವರನ್ನು ಗುರುತಿಸುವ ಸಲುವಾಗಿ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಡ್ರೋನ್ ಕ್ಯಾಮರಾ ಬಳಸುತ್ತಿದ್ದಾರೆ.
ಒಂದು ವೇಳೆ ಪೊಲೀಸರು ಇಲ್ಲವೆಂದು ನೀವು ರಸ್ತೆಗಿಳಿದರೆ ನಿಮ್ಮ ತಲೆ ಮೇಲೆ ಹಾರಾಡುವ ಡ್ರೋನ್ ಕ್ಯಾಮೆರಾ ನಿಮ್ಮನ್ನು ಸೆರೆ ಹಿಡಿಯಲಿದೆ. ಲಾಕ್ಡೌನ್ ಉಲ್ಲಂಘಿಸುವುದನ್ನು ತಡೆಯುವ ಸಲುವಾಗಿ ಪೊಲೀಸರು ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಡ್ರೋನ್ ಕ್ಯಾಮೆರಾ ಮೂಲಕ ನೀವು ಸೆರೆಯಾಗುತ್ತೀರಿ ಜೋಕೆ.