ಮೈಸೂರು,ಏ.6- ಕೊರೊನಾ ಮಹಾಮಾರಿ ತೊಲಗಲು ಸಂಕಲ್ಪ ಮಾಡಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಇಂದು ವಿಶೇಷ ಪೂಜೆ ನೆರವೇರಿಸಲಾಯಿತು.
ಚಾಮುಂಡಿ ಬೆಟ್ಟದಲ್ಲಿರುವ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಬೆಳಗಿನ ಜಾವ ಕೊರೊನಾ ಹೆಚ್ಚು ಹರಡಬಾರದು, ಸಾವು-ನೋವು ಉಂಟಾಗಬಾರದೆಂದು ಪ್ರಾರ್ಥಿಸಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.
ಪೂಜೆ ನಂತರ ದೇವಾಲಯದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಅವರು ಮಾತನಾಡಿ, ನಾಡಿನಾದ್ಯಂತ ಕೊರೊನಾ ಹರಡುತ್ತಿದೆ. ಜನರಲ್ಲಿ ರೋಗಬಾಧೆ ಹೆಚ್ಚಾಗುತ್ತಿದೆ. ಇದನ್ನು ತಡೆಯುವ ಶಕ್ತಿ ಆ ದೇವಿಯಲ್ಲಿದೆ. ಹಾಗಾಗಿ ಕೊರೊನಾ ಹೋಗಲಿ, ಜನತೆ ನೆಮ್ಮದಿಯಾಗಿರಲಿ ಎಂದು ಪ್ರಾರ್ಥಿಸಿ ಇಂದು ವಿಶೇಷ ಪೂಜೆ, ಅಭಿಷೇಕಗಳನ್ನು ನೆರವೇರಿಸಿದ್ದೇವೆ ಎಂದು ತಿಳಿಸಿದರು.
ದೇವಿ ದರ್ಶನಕ್ಕೆ ಏ.14ರ ವರೆಗೂ ಅವಕಾಶ ನೀಡುವುದಿಲ್ಲ. ಭಕ್ತರೂ ಕೂಡ ದೇವಾಲಯಕ್ಕೆ ಬರುತ್ತಿಲ್ಲ ಎಂದು ದೀಕ್ಷಿತ್ ತಿಳಿಸಿದರು.