ಶ್ರೀನಗರ :ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಭಯೋತ್ಪಾದಕ ಕೃತ್ಯಗಳನ್ನೆಸಗಲು ಸಂಚು ರೂಪಿಸಿದ್ದ ಜಮ್ಮು-ಕಾಶ್ಮೀರದಲ್ಲಿನ ಲಷ್ಕರ್ ತೊಯ್ಬಾ ಸಂಘಟನೆಯ ನೆಲೆಯೊಂದಕ್ಕೆ ದಾಳಿ ನಡೆಸಿದ ಸೇನಾ ಯೋಧರು, ನಾಲ್ವರು ವಿದ್ರೋಹಿಗಳನ್ನು ಬಂಧಿಸಿದ್ದಾರೆ. ಇವರಿಗೆ ನೆರವು ನೀಡುತ್ತಿದ್ದ ಮೂವರು ಸ್ಥಳೀಯರನ್ನು ಕೂಡಾ ವಶಕ್ಕೆ ಪಡೆದಿದ್ದಾರೆ.
ಜಮ್ಮು ಕಾಶ್ಮೀರದ ಹಂದ್ವಾರಾದಲ್ಲಿ ಸಮಾಜ ವಿದ್ರೋಹಿ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರು, ಅದನ್ನು ವಿಫಲಗೊಳಿಸಲಾಗಿದೆ . ಬಂಧಿತ ಭಯೋತ್ಪಾದಕರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾಕಾರಿಗಳು ತಿಳಿಸಿದ್ದಾರೆ.