ಸುಳ್ಳು ಸುದ್ದಿಗಳ ವಿರುದ್ಧ ಖಡಕ್ ಕ್ರಮ: ರಾಜ್ಯಗಳಿಗೆ ಕೇಂದ್ರ ಗೃಹಖಾತೆ ಆದೇಶ

ಹೊಸದಿಲ್ಲಿ : ಸಮಾಜಕ್ಕೆ ಮಾರಕವಾಗಿರುವ ಸುಳ್ಳು ಸುದ್ದಿಗಳ ವಿರುದ್ಧ ಸೂಕ್ತ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿದೆ.

ಈ ಬಗ್ಗೆ ರಾಜ್ಯಗಳಿಗೆ ಬರೆದ ಪತ್ರವೊಂದರಲ್ಲಿ, ವಾಸ್ತವ ಸಂಗತಿಗಳನ್ನು ಪರಿಶೀಲಿಸದ ಮತ್ತು ಅಸತ್ಯದಿಂದ ಕೂಡಿದ ಸುದ್ದಿಗಳ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳಲು ತಾನು ವೆಬ್ ಪೋರ್ಟಲ್ ರಚಿಸುತ್ತಿರುವುದಾಗಿ ಕೇಂದ್ರ ಗೃಹಸಚಿವಾಲಯ ತಿಳಿಸಿದೆ. ರಾಜ್ಯಗಳಲ್ಲೂ ಇದೇ ರೀತಿಯ ಪೋರ್ಟಲ್ ವ್ಯವಸ್ಥೆ ಕಲ್ಪಿಸಿ ಸುದ್ದಿಗಳ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಬಹುದೆಂದು ಸಲಹೆ ಮಾಡಿದೆ.

ವಲಸೆ ಕಾರ್ಮಿಕರು ಸಾಮೂಹಿಕವಾಗಿ ತಮ್ಮ ಊರುಗಳಿಗೆ ತೆರಳುತ್ತಿರುವ ವಿಚಾರದಲ್ಲಿ ಸುಳ್ಳು ಸುದ್ದಿ ಸೃಷ್ಟಿಸಿರುವುದನ್ನು ಸರ್ವೋನ್ನತ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದ್ದು, ಇದರಿಂದ ಇಂತಹ ಜನ ಸಮೂಹ ಹೇಳಿಕೊಳ್ಳಲಾಗದ ಯಾತನೆ ಅನುಭವಿಸಿದೆ ಎಂದು ಹೇಳಿತ್ತಲ್ಲದೆ, ಈ ಕಾರ್ಮಿಕರಿಗೆ ಆಹಾರ, ವೈದ್ಯಕೀಯ ಸೌಲಭ್ಯ, ಆಶ್ರಯ ಒದಗಿಸುವಂತೆ ನ್ಯಾಯಾಲಯ ಸೂಚನೆ ನೀಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ