ಮೈಸೂರು: ಮೈಸೂರು ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ನೂರು ಅಥವಾ ಸಾವಿರ ಆಗಬಹುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆತಂಕ ಕಾರಿ ಮಾಹಿತಿಯನ್ನು ನೀಡಿದರು. ಶುಕ್ರವಾರ ನಗರದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ನಂಜನಗೂಡು ತಾಲೂಕಿನ ಕಡಕಳ ಗ್ರಾಮದಲ್ಲಿ ರುವ ಜುಬಿಲಿಯಂಟ್ ಔಷಧ ಕಾರ್ಖಾನೆಯ 19 ಮಂದಿ ಸೋಂಕಿತರು, 233 ಕ್ಕೂ ಜನರೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಸಿಕ್ಕಿದೆ, ಅವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಈಗಾಗಲೇ ನೂರು ಮಂದಿಯ ರಕ್ತ ಹಾಗೂ ಗಂಟಲಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಇದರ ವರದಿ ಕೂಡಾ ಬರಬೇಕು. ಇನ್ನು 12 ದಿನಗಳಲ್ಲಿ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಕೊರೋನಾ ಸೋಂಕು ಇದೆ ಎಂಬ ನಿಖರವಾದ ಮಾಹಿತಿ ಸಿಗಬಹುದು. ಆ ವೇಳೆಗೆ ಕೊರೋನಾ ಸೋಂಕಿತರು ನೂರಾಗಿರಬಹುದು, ಅಥವಾ ಸಾವಿರ ಜನ ಆಗಿರಬಹುದು ಎಂದು ತಿಳಿಸಿದರು.