ಬೀದರ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ತಲ್ಲಿಣಗೊಳಿಸಿರುವ ದೆಯಲಿಯ ನಿಜಾಮೊದ್ದೀನ್‍ನಲ್ಲಿ ನಡೆದ ಜಮಾತ್ ಸಭೆಯಲ್ಲಿ ಭಾಗವಹಿಸಿ ಬೀದರ ಜಿಲ್ಲೆಗೆ ಮರಳಿದ 28 ಜನರ ಪೈಕಿ 11 ಜನರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಪ್ರಯೋಗಾಲಯದ ಮೊದಲ ಸುತ್ತಿನ ವರದಲ್ಲಿ ಸ್ಪಷ್ಟವಾಗಿದೆ.
ಕರ್ನಾಟಕ ರಾಜ್ಯದಲ್ಲಿ ಒಂದೇ ಸಲಕ್ಕೆ 11 ಜನರಿಗೆ ಇಷ್ಟೊಂದು ಪ್ರಮಾಣದಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಗಡಿ ಬೀದರ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ.
ಬೀದರ ಮೂಲದ ಒಬ್ಬರ ಆರೋಗ್ಯ ಹದಗೆಟ್ಟು ಗಂಭೀರ ಸ್ವರೂಪಕ್ಕೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರಲ್ಲಿ ಕೊರೊನಾ ವೈರಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದ ಅವರ ಹಾಗೂ ಅವರ ಪುತ್ರನ ರಕ್ತ ಮತ್ತು ಗಂಟಿನ ದ್ರವ್ಯ ತಪಾಸಣೆ ನಡೆಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿ ನೆಗೆಟಿವ್ ಬಂದಿತ್ತು. ಆದರೆ, ಈದೀಗ 14 ದಿನಗಳ ನಂತರ ನಡೆಸಿದ ಪ್ರಯೋಗದಲ್ಲಿ 11 ಜನರಲ್ಲಿ ಪಾಸಿಟಿವ್ ಬಂದಿರುವುದು ಆತಂಕದ ಬೆಳವಣಿಗೆಯಾಗಿದೆ.
ಬೀದರ ಜಿಲ್ಲೆಯಲ್ಲಿ ಇಲ್ಲಿಯವರೆಗೆ ವಿದೇಶಗಳಿಂದ ಒಟ್ಟು 579 ಜನರು ವಾಪಸ್ಸಾಗಿದ್ದಾರೆ. ಈ ಪೈಕಿ ಎಲ್ಲರನ್ನೂ ಗೃಹಬಂಧನದಲ್ಲಿ ಇಡಲಾಗಿತ್ತು. ಅಲ್ಲದೇ ಇವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿತ್ತು. ಈ ಪೈಕಿ 423 ಜನರು ಗೃಹಬಂಧನದ ಅವ ಪೂರ್ಣಗೊಳಿಸಿದ್ದಾರೆ. ಇನ್ನೂ 58 ಜನ ಗೃಹಬಂಧನದಲ್ಲಿದ್ದಾರೆ.
ಬೀದರ ಜಿಲ್ಲಾಕಾರಿ ಡಾ. ಎಚ್.ಆರ್. ಮಹಾದೇವ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲ ಹಂತದ ಪ್ರಯೋಗಾಲಯದ ವರದಿಯಲ್ಲಿ 11 ಪಾಸಿಟಿವ್ ಎಂದು ತಿಳಿದು ಬಂದಿದೆ. ಅಕೃತವಾಗಿ ವರದಿ ಬಂದಿಲ್ಲ. 11 ಜನರು ದೆಹಲಿಯ ಜಮಾತ್ ಸಭೆಯಲ್ಲಿ ಪಾಲ್ಗೊಂಡು ವಾಪಸ್ ಬಂದವರು. ಅವರ ಕುಂಬದವರನ್ನು ಗೃಹ ನಿರ್ಬಂಧಕ್ಕೊಳಪಡಿಸಲು ತಕ್ಷಣ ಕ್ರಮ ಕೈಗೊಳ್ಳುತ್ತಿದ್ದೇವೆ ಬೀದರ ಜಿಲ್ಲೆಯಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದರು.
11 ಜನರಿಗೆ ಕೊರೊನಾ ವೈರಸ್ ಬಗ್ಗೆ ಶಂಕೆಯಿದೆ. ಇನ್ನೂ ಲ್ಯಾಬ್‍ನಿಂದ ಮಾಹಿತಿ ಬರಬೇಕಾಗಿದೆ.
11 ಜನರಿಗೆ ಕೊರೊನಾ ವೈರಸ್ ಇದೆ ಎಂದು ದೃಢಪಟ್ಟರೇ ರಾಜ್ಯ ಸರ್ಕಾರವೇ ಈ ಬಗ್ಗೆ ಮಾಹಿತಿ ನೀಡುತ್ತದೆ. ಈ ಕುರಿತು ಮಾಹಿತಿ ನೀಡುವ ಅಕಾರ ನಮಗೆ ಇಲ್ಲ. ಈ 11 ಜನರ ಸಂಪರ್ಕದಲ್ಲಿದ್ದ ಪ್ರಥಮ ಹಂತದ ಜನರನ್ನು ಗುರುತಿಸಲಾಗಿದೆ. 2ನೇ ಹಂತದ ಜನರನ್ನು ಗುರುತಿಸುವ ಕೆಲಸ ಜಾರಿಯಲ್ಲಿದೆ. ಒಟ್ಟಾರೆ ಬೀದರ ಜಿಲ್ಲೆಯಲ್ಲಿ ಈ 11 ಜನರ ಸಂಪರ್ಕದಲ್ಲಿ ಕುಟುಂಬದವರು ಹಾಗೂ ಸಂಬಂಕರು ಸೇರಿ ಒಟ್ಟು 60 ರಿಂದ 90 ಜನರನ್ನು ಗುರುತಿಸಲಾಗಿದೆ ಎಂದರು.