ಬೆಂಗಳೂರು, ಮಾ.17- ಕನ್ನಡ ಚಿತ್ರರಂಗದ ಪವರ್ಸ್ಟಾರ್ ಖ್ಯಾತಿಯ ಪುನೀತ್ ರಾಜ್ಕುಮಾರ್ ಹಾಗೂ ನವರಸ ನಾಯಕ ಜಗ್ಗೇಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ಪುನೀತ್ ರಾಜ್ಕುಮಾರ್ ಸರಳವಾಗಿ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಜಗ್ಗೇಶ್ ಅವರು ಮಂತ್ರಾಲಯಕ್ಕೆ ತೆರಳಿ ತಮ್ಮ ಹುಟ್ಟುಹಬ್ಬದ ದಿನ ರಾಯರ ದರ್ಶನ ಪಡೆದಿದ್ದಾರೆ.
ಪುನೀತ್ರಾಜ್ಕುಮಾರ್ ಇದೇ ಮೊದಲ ಬಾರಿಗೆ ಸರಳವಾಗಿ ಕುಟುಂಬಸ್ಥರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುವುದಿಲ್ಲ ಎಂದು ಪುನೀತ್ರಾಜ್ಕುಮಾರ್ ಮೊದಲೆ ಮಾಹಿತಿ ನೀಡಿದಂತೆ ಈ ಬಾರಿ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅಭಿಮಾನಿಗಳು, ಹಿತೈಷಿಗಳು, ಬಂಧು ಮಿತ್ರರು ದೂರವಾಣಿ ಮೂಲಕ ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ.
ಹಾಗಿದ್ದು ಕೆಲವು ಅಭಿಮಾನಿಗಳು ಮನೆ ಬಳಿ ಬಂದಿದ್ದು, ಅವರು ಸಹ ವಿಷಯ ತಿಳಿದು ಹಿಂದಿರುಗಿದ್ದಾರೆ.
ಆದರೆ, ಅಭಿಮಾನಿಗಳಿಗೆ ಪವರ್ ಸ್ಟಾರ್ ಅಭಿನಯದ ಚಿತ್ರಗಳ ಟೀಸರ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆಯಾಗಿ ಡಬಲ್ ಧಮಾಕಾ ನೀಡಿದಂತಾಗಿದೆ.
ಅವರ ಅಭಿನಯದ ಯುವರತ್ನ ಚಿತ್ರದ ಟೀಜರ್ ಹಾಗೂ ಜೇಮ್ಸ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಅಪ್ಪು ಅವರ 45ನೇ ಹುಟ್ಟುಹಬ್ಬದ ದಿನ ಬಿಡುಗಡೆಗೊಂಡಿದೆ.
ಮತ್ತೊಬ್ಬ ಜನಪ್ರಿಯ ನಟ ಜಗ್ಗೇಶ್ 57ನೇ ವರ್ಷದ ಹುಟ್ಟುಹಬ್ಬವನ್ನು ರಾಯರ ಸನ್ನಿಧಿಯಲ್ಲಿ ಆಚರಿಸಿಕೊಂಡಿದ್ದಾರೆ. ಒಟ್ಟಾರೆ ಈ ಬಾರಿ ಕೊರೊನಾ ಭೀತಿ ಎಲ್ಲೆಡೆ ಆವರಿಸಿದ್ದು, ಸಡಗರ, ಸಂಭ್ರಮಕ್ಕೆ ತೆರೆ ಎಳೆಯಲಾಗಿರುವುದರಿಂದ ಸರಳವಾಗಿ ಹುಟ್ಟುಹಬ್ಬ ಆಚರಸಲಾಗಿದೆ.