ಪೆಟ್ರೋಲ್ ಬೆಲೆ ಮತ್ತೆ ಕುಸಿತ, ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ದರ ಹೀಗಿದೆ

ನವದೆಹಲಿ: ಜಾಗತಿಕ ಮಾರಕಟ್ಟೆಯಲ್ಲಿ ಕಚ್ಚಾ ತೈಲಧಾರಣೆ ಪಾತಾಳಕ್ಕೆ ಕುಸಿಯುತ್ತಿದ್ದು ದೆಹಲಿಯಲ್ಲಿ ಬುಧವಾರ ಮತ್ತೆ ಪೆಟ್ರೋಲ್ ದರ ಲೀಟರ್ ಗೆ 2.69 ರೂಪಾಯಿ. ಡೀಸೆಲ್ 2.33 ರೂಪಾಯಿ ಇಳಿಕೆಯಾಗಿದೆ. ಹೋಳಿ ನಂತರ ಜನರಿಗೆ ಖುಷಿ ಪಡಲು ಮತ್ತೊಂದು ಕಾರಣ ದೊರಕಿದೆ.

ಅಂತಾರಾರಾಷ್ಟ್ರೀಯ ಕಚ್ಚಾ ತೈಲ ಕುಸಿತದ ನಂತರ ತೈಲ ಬೆಲೆ ಮತ್ತಷ್ಟು ಕುಸಿದಿದೆ.ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಜಾಗತಿಕವಾಗಿ ಏರಿದ ನಂತರ ಬೇಡಿಕೆಯ ಕುಸಿತದಿಂದಾಗಿ ಕಚ್ಚಾ ತೈಲ ಬೆಲೆ ಕುಸಿಯುತ್ತಿದೆ.

ರಾಜಧಾನಿ ಬೆಂಗಳೂರಿನಲ್ಲಿ ಈಗ ಪೆಟ್ರೋಲ್ ದರ ಲೀಟರ್ ಗೆ 72 ರೂಪಾಯಿ 70 ಪೈಸೆ, ಡೀಸೆಲ್ 65 ರೂಪಾಯಿ 16 ಪೈಸೆಯಾಗಿದೆ. ದೆಹಲಿಯಲ್ಲಿ ಈಗ ಪೆಟ್ರೋಲ್ ಲೀಟರ್ ಗೆ 70 ರೂಪಾಯಿ 29 ಪೈಸೆ ಮತ್ತು ಡೀಸೆಲ್ 63 ರೂಪಾಯಿ 1 ಪೈಸೆಯಷ್ಟಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಫೆಬ್ರವರಿ 27ರಿಂದ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುತ್ತಲೇ ಇದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ