ಪೆಟ್ರೋಲ್, ಡೀಸೆಲ್ ಇನ್ನಷ್ಟು ಅಗ್ಗ; ಜನವರಿ 11ರಿಂದೀಚೆ ಐದೂವರೆ ರೂ ಬೆಲೆ ಇಳಿಕೆ

ಬೆಂಗಳೂರು: ಜಾಗತಕ ಕಚ್ಛಾ ತೈಲ ಬೆಲೆ ಪ್ರಪಾತಕ್ಕೆ ಜಿಗಿಯುತ್ತಿರುವ ಪ್ರಕ್ರಿಯೆ ಮುಂದುವರಿಯುತ್ತಿರುವಂತೆಯೇ ಭಾರತದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಳಿಕೆ ಕಾಣುತ್ತಿವೆ. ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ 25 ಮತ್ತು 26 ಪೈಸೆ ಇಳಿಕೆಯಾಗಿವೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 73.01 ರೂಪಾಯಿಗೆ ಬಂದಿದೆ. ಡೀಸೆಲ್ ಬೆಲೆ 65.42 ರೂಪಾಯಿಗೆ ಇಳಿದಿದೆ.

ದೆಹಲಿ ಮತ್ತು ಮುಂಬೈನಲ್ಲಿ ಪೆಟ್ರೋಲ್ ಬೆಲೆ 24 ಪೈಸೆಯಷ್ಟು ಇಳಿಕೆಯಾಗಿವೆ. ಇಲ್ಲಿ ಲೀಟರ್ ಪೆಟ್ರೋಲ್​ನ ಬೆಲೆ 70.59 ರೂ ಇದೆ. ಇವೆರಡು ಮಹಾನಗರದಲ್ಲಿ ಡೀಸೆ ಬೆಲೆ ಕ್ರಮವಾಗಿ 25 ಮತ್ತು 26 ಪೈಸೆ ಇಳಿಕೆಯಾಗಿ 63.26 ಹಾಗು 66.24 ರೂ ಬೆಲೆ ಇದೆ.

ಬೆಂಗಳೂರಿನಲ್ಲಿ ಜನವರಿ 11ರಿಂದೀಚೆ ಪೆಟ್ರೋಲ್ ಬೆಲೆ 5.55 ರೂಪಾಯಿ ಇಳಿಕೆಯಾಗಿದೆ. ಕಳೆದ 10 ದಿನದಲ್ಲಿ 1 ರೂ 33 ಪೈಸೆ ಇಳಿಕೆಯಾಗಿದೆ. ಇನ್ನು ಡೀಸೆಲ್ ಬೆಲೆ ಕೂಡ ಜನವರಿ 11ರಿಂದೀಚೆ 6.06 ರೂ ಇಳಿಕೆ ಕಂಡಿದೆ. ಕಳೆದ 10 ದಿನದಲ್ಲಿ ಡೀಸೆಲ್ 1.28 ರೂ ಬೆಲೆ ಕುಸಿತಕಂಡಿದೆ.

ಮಾರ್ಚ್ 9ರಂದು ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ:
ಪೆಟ್ರೋಲ್ ಒಂದು ಲೀಟರ್​ಗೆ 73.01 ರೂ., ಡೀಸೆಲ್ ಒಂದು ಲೀಟರ್​ಗೆ 65.42 ರೂಭಾರತದಲ್ಲಿ ಪೆಟ್ರೋಲ್ ಬೆಲೆಯಲ್ಲಾಗುತ್ತಿರುವ ಸತತ ಇಳಿಕೆಗೆ ಜಾಗತಿಕ ಕಚ್ಛಾ ತೈಲದ ಬೆಲೆ ಕುಸಿತವೇ ಕಾರಣವಾಗಿದೆ. ಕೊರೋನಾ ವೈರಸ್ ಸೋಂಕಿನಿಂದಾಗಿ ಜಾಗತಿಕವಾಗಿ ಪೆಟ್ರೋಲ್, ಡೀಸೆಲ್ ಬೇಡಿಕೆ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರ ವೃದ್ಧಿಸಲು ತೈಲ ಕಂಪನಿಗಳು ಬೆಲೆ ಸಮರಕ್ಕೆ ಇಳಿದಿವೆ. ರಷ್ಯಾ ಮತ್ತು ಸೌದಿ ಅರೇಬಿಯಾ ಬೆಲೆ ಇಳಿಕೆ ಪೈಪೋಟಿಗೆ ನಿಂತಿವೆ. ತತ್​ಪರಿಣಾಮವಾಗಿ ಸೋಮವಾರ ಬ್ರೆಂಟ್ ಕ್ರ್ಯೂಡ್ ಫೂಚರ್ಸ್ ಮಾರುಕಟ್ಟೆಯಲ್ಲಿ ತೈಲ ಬೆಲೆ ಒಂದು ಬ್ಯಾರಲ್​ಗೆ 31.02 ಡಾಲರ್​ಗೆ ಇಳಿದಿದೆ. ಒಂದೇ ದಿನ ಶೇ. 31.5ರಷ್ಟು ಬೆಲೆ ಕುಸಿತ ಕಂಡಿದೆ. 1991ರ ನಂತರ ಶೇಕಡವಾರು ಲೆಕ್ಕದಲ್ಲಿ ಈ ಮಟ್ಟಿಗೆ ಕುಸಿತ ಕಂಡಿದ್ದು ಇದೇ ಮೊದಲ ಬಾರಿ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ