ಪುಲ್ವಾಮಾ ದಾಳಿ ಸಾಮಾಗ್ರಿ ಅಮೆಜಾನ್ ನಿಂದ ಖರೀದಿಸಿದ್ದ ಉಗ್ರರು!

ನವದೆಹಲಿ: 40 ಮಂದಿ ಸಿಆರ್’ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮಾ ಉಗ್ರರ ದಾಳಿಗೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.

ಪುಲ್ವಾಮಾದಲ್ಲಿ ದಾಳಿ ನಡೆಸಿದ್ದ ಇಬ್ಬರು ಆರೋಪಿಗಳನ್ನು ಎನ್ಐಎ ಅಧಿಕಾರಿಗಳು ನಿನ್ನೆಯಷ್ಟೇ ಬಂಧನಕ್ಕೊಳಪಡಿಸಿ ವಿಚಾರಣೆಗೊಳಪಡಿಸಿದ್ದು, ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳನ್ನು ಆರೋಪಿಗಳು ಬಿಚ್ಚಿಟ್ಟಿದ್ದಾರೆ.

ವಿಚಾರಣೆ ವೇಲೆ ಆರೋಪಿಗಳು ತಾವು ಇಡಿ ಬಾಂಬ್ ತಯಾರಿಕೆಗೆ ಬೇಕಾದ ರಾಸಾಯನಿಕ ಸಾಮಾಗ್ರಿಗಳು, ಬ್ಯಾಟರಿಗಳು ಮತ್ತು ಇತರೆ ಉಕರಣಗಳನ್ನು ಪಾಕಿಸ್ತಾನದ ಜೈಷ್ ಇ ಮೊಹಮ್ಮದ್ ಉಗ್ರರ ನಿರ್ದೇಶನದಂತೆ ಅಮೆಜಾನ್ ನಲ್ಲಿ ಆನ್ ಮೈನ್ ಮೂಲಕ ತರಿಸಿಕೊಂಡಿದ್ದೆವು ಎಂದು ಹೇಳಿದ್ದಾರೆ.

ಪುಲ್ವಾಮಾ ದಾಳಿಯ ಭಾಗವಾಗಿ ತರಿಸಲಾದ ವಸ್ತುಗಳನ್ನು ತಾನೇ ಸ್ವತಃ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕರಿಗೆ ತಲುಪಿಸಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆಂದು ತಿಳಿದುಬಂದಿದೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ