
ನವದೆಹಲಿ: ಪೌರತ್ವದ ಕಿಚ್ಚಿನ ಜೊತೆ ಕೊರೊನ ವೈರಸ್ ನರ್ತನಕ್ಕೆ ದೇಶ ನಲುಗುತ್ತಿದೆ. ಈ ನಡುವೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ಪ್ರಧಾನಿ ನರೇಂದ್ರ ಮೋದಿ ಹೊರಬರುವುದಾಗಿ ಘೋಷಣೆ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಸೋಮವಾರ ರಾತ್ರಿ ತಮ್ಮೆಲ್ಲಾ ಸಾಮಾಜಿಕ ಜಾಲತಾಣ ಖಾತೆಗಳಾದ ಟ್ವಿಟರ್, ಫೇಸ್ಬುಕ್, ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಂಗಳಿಗೆ ಇದೇ ಭಾನುವಾರ ಗುಡ್ಬೈ ಹೇಳುವುದಾಗಿ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಅವರ ಈ ಟ್ವೀಟ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ನಮ್ಮೆಲ್ಲರ ಸ್ಪೂರ್ತಿಯಾಗಿರುವ ನೀವು ಟ್ವಿಟರ್ನಿಂದ ಹೊರಗೆ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ. ದಿನಬೆಳಗಾಗುವುದರಲ್ಲಿ #NoModiNoTwitter ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ. ಮೋದಿ ಇಲ್ಲದಿದ್ದರೆ, ಟ್ವಿಟರೇ ಇಲ್ಲ. ಈ ನಿರ್ಧಾರ ಕೈಗೊಳ್ಳಬೇಡಿ ಎಂದು ಕೇಳಿಕೊಂಡಿದ್ದಾರೆ.