
ನವದೆಹಲಿ: ರಾಜ್ ಘಾಟ್ ಗೆ ತೆರಳಿದಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಡೊನಾಲ್ಡ್ ಡೊನಾಲ್ಡ್ ಟ್ರಂಪ್ ಹಾಗೂ ಮೆಲಾನಿಯಾ ಮಹಾತ್ಮ ಗಾಂಧಿ ಅವರ ಸಮಾಧಿಗೆ ಪುಷ್ಪ ಮಾಲಿಕೆ ಹಾಕಿ ಒಂದು ನಿಮಿಷ ಮೌನಚರಿಸಿದರು.
ನಂತರ ರಾಜ್ ಘಾಟ್ ನಲ್ಲಿ ಸುತ್ತಾಡಿದ ಡೊನಾಲ್ಡ್ ಟ್ರಂಪ್ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಮಹಾತ್ಮ ಗಾಂಧಿ ಅವರ ಸಿದ್ಧಾಂತ ಹಾಗೂ ಭಾರತದ ಸಾರ್ವಭೌತ್ವದೊಂದಿಗೆ ಅಮೆರಿಕಾದ ಜನರು ಬಲವಾಗಿ ನಿಲ್ಲಲಿದ್ದಾರೆ. ಇದೊಂದು ಅಪಾರ ಗೌರವ ಎಂದು ಅವರು ಬರೆದಿದ್ದಾರೆ.