![HDK-GTD](http://kannada.vartamitra.com/wp-content/uploads/2020/02/HDK-GTD-572x381.jpg)
ಬೆಂಗಳೂರು: ಇಂದು ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನದಲ್ಲಿ ಭಾಗವಹಿಸುವುದು ಬೇಡ ಎಂದು ಜೆಡಿಎಸ್ ನಿರ್ಧರಿಸಿದೆ. ಇನ್ನು ತಮ್ಮ ಅಭ್ಯರ್ಥಿ ಹಿಂದಕ್ಕೆ ಸರಿದ ಹಿನ್ನೆಲೆ ಕಾಂಗ್ರೆಸ್ ನಾಯಕರು ಕೂಡ ಮತದಾನದಲ್ಲಿ ಭಾಗಿಯಾಗುತ್ತಿಲ್ಲ. ಈ ಎಲ್ಲದರ ನಡುವೆ ಜೆಡಿಎಸ್ ನಾಯಕ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಪರಿಷತ್ ಚುನಾವಣೆಯಲ್ಲಿ ಮತಚಲಾಯಿಸುವ ಮೂಲಕ ತಮ್ಮ ನಾಯಕರಿಗೆ ಶಾಕ್ ನೀಡಿದರು.
ಅಧಿವೇಶನ ಹಿನ್ನೆಲೆ ಕರೆಯಲಾಗಿದ್ದ ಜೆಡಿಎಸ್ ಸಭೆಗೆ ಗೈರಾದ ಅವರು, ಪರಿಷತ್ ಚುನಾವಣೆಯಲ್ಲಿ ಭಾಗಿಯಾಗಿ ಸಿಎಂ ಬಿಎಸ್ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದರು.
ಮೈತ್ರಿ ಸರ್ಕಾರ ಪತನವಾದಾಗಿನಿಂದಲೂ ಬಿಜೆಪಿ ನಾಯಕರ ಜೊತೆ ಮೃದು ಧೋರಣೆ ತಾಳುವ ಮೂಲಕ ಅವರಿಗೆ ಬೆಂಬಲವಾಗಿ ನಿಲ್ಲುತ್ತಿರುವ ಜಿಟಿ ದೇವೇಗೌಡ ಅವರ ನಡೆ ಕುರಿತು ಮತ್ತೊಮ್ಮೆ ಅಸಮಾಧಾನ ಹೊರ ಹಾಕಿದ ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ, ಅವರು ಮತಚಲಾಯಿಸಿರುವುದು ತಮಗೆ ಗೊತ್ತಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೇ, ಜಿಟಿ ದೇವೇಗೌಡ ನಮ್ಮ ಪಕ್ಷದಲ್ಲಿಯೇ ಇದ್ದಾರಾ ಎಂಬ ಪ್ರಶ್ನೆಯನ್ನು ಹಾಕಿದ್ದಾರೆ.