ವಾಷಿಂಗ್ಟನ್, ಫೆ.7-ಉಗ್ರರ ವಿರುದ್ಧ ಮುಂದುವರೆದ ಕಾರ್ಯಾಚರಣೆ ಯೊಂದರಲ್ಲಿ ಅಮೆರಿಕ ಯೋಧರು ಭಾರೀ ಭರ್ಜರಿ ಬೇಟೆಯಾಡಿದ್ದಾರೆ.
ಅರಬ್ನ ದ್ವೀಪಕಲ್ಪದ ಅಲ್ ಖೈದಾ ಮುಖ್ಯಸ್ಥ ಖಾಸಿಂ ಅಲ್ ರಿಮಿಯನ್ನು ಹತ್ಯೆ ಮಾಡಿದೆ. ಅಲ್ ಖೈದಾ ಮುಖ್ಯಸ್ಥನನ್ನು ಹತ್ಯೆ ಮಾಡಿರುವುದನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ.
ಅಮೆರಿಕಾದ ನೌಕಾ ನೆಲೆ ಮೇಲೆ ನಡೆದ ದಾಳಿ ಹೊಣೆಯನ್ನು ಅಲ್ ಖೈದಾ ಹೊತ್ತಿದ್ದು, ಇದರ ಬೆನ್ನಲ್ಲೇ ಅಮೆರಿಕಾ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದೆ.
ಅಮೆರಿಕಾದ ಯಮೆನ್ನಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸಿದ್ದು, ಅರೇಬಿಯನ್ ಪೆನಿನ್ಸುಲಾದಲ್ಲಿ ಅಲ್ ಖೈದಾ ಸಂಘಟನೆಯ ಸಂಸ್ಥಾಪಕ ಮತ್ತು ನಾಯಕ ಖಾಸಿಂ ಅಲ್ ರಿಮಿಯನ್ನು ಹತ್ಯೆ ಮಾಡಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಪ್ರೋ ಅಮೆರಿಕಾದ ನೌಕಾ ನೆಲೆ ಮೇಲೆ ಡಿಸೆಂಬರ್ 6 ರಂದು ದಾಳಿ ನಡೆದಿತ್ತು. ಈ ದಾಳಿಯ ಹೊಣೆಯನ್ನು ಅಲ್ ಖೈದಾ ಹೊತ್ತುಕೊಂಡಿತ್ತು. ದಾಳಿಯಲ್ಲಿ ವಾಯುದಳದ ಅಧಿಕಾರಿ ಸೇರಿ ಅಮೆರಿಕಾದ ಮೂವರು ನಾಯಕರನ್ನು ಹತ್ಯೆ ಮಾಡಿದ್ದ.
ಅಮೆರಿಕ ಸೇನಾಪಡೆಗಳು ಆಫ್ಘಾನಿಸ್ತಾನ್ ಮತ್ತು ಸಿರಿಯಾ ದೇಶಗಳ ಮೇಲೆ ನಡೆಸಿದ ಡ್ರೋಣ್ ದಾಳಿಗಳಲ್ಲಿ ಐಎಸ್ ಉಗ್ರಗಾಮಿ ಸಂಘಟನೆಗಳ ಮುಖಂಡರು ಹತ್ಯೆಯಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.