ದೋಸ್ತಿ ಅಭ್ಯರ್ಥಿ ಕಣಕ್ಕೆ: ಲಕ್ಷ್ಮಣ ಸವದಿ ಫುಲ್ ಟೆನ್ಶನ್

ಬೆಂಗಳೂರು: ತೆರವಾಗಿರೋ ಒಂದು ವಿಧಾನ ಪರಿಷತ್ ಸ್ಥಾನಕ್ಕೆ ನಡೆಯೋ ಚುನಾವಣೆ ಕಣ ರಂಗೇರತೊಡಗಿದೆ. ಅವಿರೋಧವಾಗಿ ಆಯ್ಕೆ ಆಗೋ ಕನಸು ಕಂಡಿದ್ದ ಡಿಸಿಎಂ ಲಕ್ಷ್ಮಣ ಸವದಿಗೆ ಹೊಸ ತಲೆನೋವು ಶುರುವಾಗಿದೆ. ಕಾಂಗ್ರೆಸ್- ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಕಣಕ್ಕಿಳಿದಿರೋದು ಸವದಿಗೆ ಫುಲ್ ಟೆನ್ಶನ್ ತರಿಸಿದೆ. ಹೀಗಾಗಿ ಗೆಲ್ಲೋಕೆ ಅಗತ್ಯವಾದ ಕಾರ್ಯ ಚಟುವಟಿಕೆಗಳನ್ನು ಮಾಡೋದಕ್ಕೆ ಸವದಿ ಮುಂದಾಗಿದ್ದಾರೆ.

ಫೆಬ್ರವರಿ 17ರಂದು ಚುನಾವಣೆ ನಡೆಯಲಿದೆ. ಬಿಜೆಪಿ ಹೈಕಮಾಂಡ್ ಸವದಿ ಹೆಸರು ಫೈನಲ್ ಮಾಡಿ, ನಾಮಪತ್ರ ಸಲ್ಲಿಕೆಯೂ ಆಗಿತ್ತು. ಗುರುವಾರ ಕೊನೆಯ ಘಳಿಗೆಯಲ್ಲಿ ಅನಿಲ್ ಕುಮಾರ್ ರನ್ನ ದೋಸ್ತಿ ಪಕ್ಷಗಳು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿವೆ. ಹೀಗಾಗಿ ಚುನಾವಣೆ ಅನಿವಾರ್ಯವಾಗಿದೆ. ಸಂಖ್ಯಾಬಲದ ಪ್ರಕಾರ ಬಿಜೆಪಿಗೆ ಗೆಲುವು ನಿರಾಯಾಸವಾಗಿ ಸಿಗಲಿದೆ. ಆದರೆ ಗುಪ್ತ ಮತದಾನ ಆಗಿರೋದ್ರಿಂದ 7-8 ಶಾಸಕರು ಕ್ರಾಸ್ ವೋಟ್ ಮಾಡಿದ್ರೆ ಸವದಿಗೆ ಸೋಲು ಖಚಿತವಾಗಲಿದೆ. ಈ ಇದೇ ಕ್ರಾಸ್ ವೋಟ್ ಭೀತಿ ಸವದಿಗೆ ಕಾಡ್ತಿದೆ.

 

ಸೋತ ಲಕ್ಷ್ಮಣ ಸವದಿಯನ್ನ ಡಿಸಿಎಂ ಮಾಡಿರೋದು ಪಕ್ಷದ ಬಹುತೇಕ ಶಾಸಕರಿಗೆ ಇಷ್ಟ ಇಲ್ಲ. ಹೀಗಾಗಿ ಅಸಮಾಧಾನಿತ ಶಾಸಕರನ್ನ ಮನವೊಲಿಸಿ ಕ್ರಾಸ್ ವೋಟ್ ಮಾಡಿಸೋ ಪ್ಲಾನ್ ದೋಸ್ತಿ ನಾಯಕರದ್ದು. ಒಂದು ವೇಳೆ ಕ್ರಾಸ್ ವೋಟಿಂಗ್ ಆದರೆ ಸವದಿಗೆ ಗೆಲವು ಕಷ್ಟ ಆಗಲಿದೆ. ನಿನ್ನೆ ದೋಸ್ತಿಗಳು ಅಭ್ಯರ್ಥಿ ಹಾಕಿದ್ದೆ ತಡ, ಡಿಸಿಎಂ ಸವದಿಗೆ ಫುಲ್ ಭಯ ಶುರುವಾಗಿದೆ. ಹೀಗಾಗಿ ಇಂದು ಸಿಎಂ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ರು. ಖಾಸಗಿ ಕಾರಿನಲ್ಲಿ ಬಂದು ಸಿಎಂ ಜೊತೆ ಪರಿಷತ್ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದಾರೆ.

ವಿಪ್ ಜಾರಿ ಮಾಡೋದ್ರಿಂದ ಕ್ರಾಸ್ ವೋಟ್ ಆಗೊಲ್ಲ ಎನ್ನಲಾಗ್ತಿದೆ. ಆದರೆ ಗುಪ್ತ ಮತದಾನ ವ್ಯವಸ್ಥೆ ಆಗಿರೋದ್ರಿಂದ್ರ ಯಾರು ಕ್ರಾಸ್ ವೋಟ್ ಹಾಕಿದ್ದಾರೆ ಅಂತ ಗೊತ್ತಾಗೊಲ್ಲ. ಹೀಗಾಗಿ ಸವದಿ ಮೇಲೆ ಅಸಮಾಧಾನ ಇರೋ ಶಾಸಕರ ಗುಂಪು ಕ್ರಾಸ್ ವೋಟ್ ಮಾಡಬಹುದು ಅನ್ನೋ ಅನುಮಾನಗಳನ್ನು ತಳ್ಳಿ ಹಾಕುವಂತಿಲ್ಲ. ಒಟ್ಟಿನಲ್ಲಿ ಬಹುಮತ ಇದ್ದರು ಸವದಿಗೆ ಈಗ ಭೀತಿ ಶುರುವಾಗಿದ್ದು, ಬಿಜೆಪಿ ಶಾಸಕರು ಸವದಿ ಕೈ ಹಿಡಿಯುತ್ತಾರಾ ಅಥವಾ ಕೈ ಬಿಡ್ತಾರಾ ಅಂತ ಫೆಬ್ರವರಿ 17 ಕ್ಕೆ ಗೊತ್ತಾಗಲಿದೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ