ಗುಂಡು ಹಾರಿಸುವುದನ್ನು ನಿಲ್ಲಿಸಿ: ಸಿಎಎ ವಿರುದ್ಧ ಲೋಕಸಭೆಯಲ್ಲಿ ದನಿ ಎತ್ತಿದ ವಿರೋಧ ಪಕ್ಷಗಳು

ನವದೆಹಲಿ: ಕೇಂದ್ರದ ಆಡಳಿತಾರೂಢ ಎನ್’ಡಿಎ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರು ದನಿ ಎತ್ತಿದ್ದು, ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವುದನ್ನು ನಿಲ್ಲಿಸಿ ಎಂದು ಘೋಷಣೆ ಕೂಗುತ್ತಿದ್ದಾರೆ.

ಲೋಕಶಭೆಯಲ್ಲಿ 2020 ಬಜೆಟ್ ಅಧಿವೇಶನ ನಡೆಸುತ್ತಿದ್ದು, ಅಧಿವೇಶನದ ಪ್ರಶ್ನಾವಳಿ ಅವಧಿಯಲ್ಲಿ ವಿರೋಧ ಪಕ್ಷಗಳ ನಾಯಕರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಘೋಷಣೆಗಳನ್ನು ಕೂಗಿದ್ದಾರೆಂದು ವರದಿಗಳು ತಿಳಿಸಿವೆ.

ಸಿಎಎಗೆ ಬೇಡ ಎನ್ನಿ, ಪ್ರಜಾಪ್ರಭುತ್ವವನ್ನು ಉಳಿಸಿ ಮತ್ತು ನಮ್ಮ ಸಂವಿಧಾನವನ್ನು ರಕ್ಷಿಸಿ ಎಂದು ವಿರೋಧ ಪಕ್ಷಗಳ ನಾಯಕರು ಘೋಷಣೆ ಕೂಗಿದ್ದಾರೆ. ಅಲ್ಲದೆ, ಗೋಲಿ ಮಾರ್ನಾ ಬಂದ್ ಕರೋ, ದೇಶ್ ಕೋ ತೋಡ್ನಾ ಬಂದ್ ಕರೋ (ಗುಂಡು ಹಾರಿಸುವುದನ್ನು  ನಿಲ್ಲಿಸಿ, ದೇಶ ಒಡೆಯುವುದನ್ನು ನಿಲ್ಲಿಸಿ) ಎಂದು ಘೋಷಣೆ ಕೂಗಿದ್ದಾರೆ.

ಈ ವೇಳೆ ಮಾತನಾಡಿರುವ ಸ್ಪೀಕರ್ ಓಂ ಬಿರ್ಲಾ ಅವರು, ಯುವಕರ ಕೌಶಲ್ಯಾಭಿವೃದ್ಧಿ ಕುರಿತ ಪ್ರಮುಖ ವಿಚಾರದ ಬಗ್ಗೆ ಚರ್ಚೆ ನಡೆಯುವ ಅಗತ್ಯವಿದ್ದು, ಪ್ರತೀಯೊಬ್ಬರು ತಮ್ಮ ತಮ್ಮ ಸ್ಥಾನಗಳಲ್ಲಿ ಆಸೀನರಾಗಬೇಕೆಂದು ಮನವಿ ಮಾಡಿಕೊಂಡರು. ಅಲ್ಲದೆ, ಪ್ರಶ್ನಾವಳಿ ಅವಧಿ ಸುಸೂತ್ರವಾಗಿ ನಡೆಯುವಂತೆ ಅನುವು ಮಾಡಿಕೊಡುವಂತೆ ಕೇಳಿದರು. ಪ್ರಶ್ನಾವಳಿ ಅವಧಿ ಪೂರ್ಣಗೊಂಡ ಬಳಿಕ ಶೂನ್ಯ ಅವಧಿಯಲ್ಲಿ ಸದಸ್ಯರು ದನಿ ಎತ್ತುವ ವಿಚಾರದ ಬಗ್ಗೆಯೂ ಚರ್ಚೆ ನಡೆಸುವುದಾಗಿ ಇದೇ ವೇಳೆ ಸ್ಪೀಕರ್ ಭರವಸೆ ನೀಡಿದರು. ಆದರೂ ಇದಾವುದ್ಕಕೂ ಜಗ್ಗದ ವಿರೋಧ ಪಕ್ಷಗಳ ನಾಯಕರು ತಮ್ಮ ಸದನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮುಂದುವರೆಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ