ಬಜೆಟ್‌ 2020: ಅರುಣ್ ಜೇಟ್ಲಿ ನೆನಪಿಸಿಕೊಂಡ ನಿರ್ಮಲಾ ಸೀತಾರಾಮನ್

ಹೊಸದಿಲ್ಲಿಬಹುನಿರೀಕ್ಷಿತ ಬಜೆಟ್ 2020 ಮಂಡನೆ ಸಂದರ್ಭದಲ್ಲಿ ಹಣಕಾಸು ಸಚಿವರಾಗಿದ್ದ ದಿವಂಗತ ಅರುಣ್ ಜೇಟ್ಲಿಯವರನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ನೆನಪಿಸಿಕೊಂಡರು.

ಎರಡನೇ ಬಾರಿ ಬಜೆಟ್‌ ಮಂಡನೆ ಮಾಡುತ್ತಿರುವ ನಿರ್ಮಲಾ ಸೀತಾರಾಮನ್‌ ಇಂದಿನ ಹಣಕಾಸು ಸ್ಥಿತಿ ಉತ್ತಮವಾಗಿರಲು ಕಾರಣ ಅರುಣ್ ಜೇಟ್ಲಿ ಎಂದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ಇದಕ್ಕೆ ಮೇಜು ತಟ್ಟಿ ಸಮ್ಮತಿಸಿದರು.
ಇದೇ ವೇಳೆ ಜಿಎಸ್‌ಟಿ ಜಾರಿಯಿಂದ ಭಾರತವನ್ನು ಏಕತೆಯತ್ತ ಕೊಂಡೊಯ್ಯಲು ಸಾಧ್ಯವಾಗುತ್ತಿದೆ. ಈ ಹಣಕಾಸು ವರ್ಷದಲ್ಲಿ 40 ಕೋಟಿ ಜನರು ಜಿಎಸ್‌ಟಿ ಪಾವತಿಸಿದ್ದಾರೆ. ಜಿಎಸ್‌ಟಿಯಿಂದ ರಿಟರ್ನ್ಸ್ ಸಲ್ಲಿಕೆ ಮಾಡಲು ಸುಲಭವಾಗಿದೆ. ಸಾರಿಗೆ ವಲಯದಲ್ಲಿ ಭಾರೀ ಅಭಿವೃದ್ದಿಗೆ ಜಿಎಸ್‌ಟಿ ಕಾರಣವಾಗಿದೆ ಎಂದರು.
ಶಾಲಿಮಾರ್ ತೋಟದಲ್ಲಿ ಅರಳುವ ಹೂವಿನಂತೆ ನಮ್ಮ ದೇಶ
ಬಜೆಟ್‌ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶಾಯರಿಯೊಂದನ್ನು ಹೇಳುವ ಮೂಲಕ ಗಮನ ಸೆಳೆದರು. ನಮ್ಮ ದೇಶ ಶಾಲಿಮಾರ್ ಹೂವಿನಂತೆ ಅರಳುವ ದೇಶವಾಗಿದೆ. ತಮ್ಮ ದೇಶ ವಿಶ್ವದಲ್ಲೇ ಎಲ್ಲರಿಗೂ ಇಷ್ಟವಾಗುವ ದೇಶ. ಯುವಕರ ಬಿಸಿ ರಕ್ತ ಇದ್ದಂತೆ ನಮ್ಮ ದೇಶ ಎನ್ನುವ ಶಾಯರಿಯನ್ನು ನುಡಿದು ಗಮನ ಸೆಳೆದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ