ಸಂಪುಟ ಕಸರತ್ತು- ಮೂಲ ಬಿಜೆಪಿಗರಲ್ಲಿ ಯಾರಿಗೆ ಲಕ್?, ಯಾರಿಗೆಲ್ಲ ಚೆಕ್?

ಬೆಂಗಳೂರು: ಬಿಜೆಪಿಯಲ್ಲಿ ಈಗ ಕುತೂಹಲ ಗರಿಗೆದರಿದೆ. 10+3 ಫಾರ್ಮೂಲಾಗೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ ಕೊಟ್ಟಿದ್ದೂ ಆಗಿದೆ. ಆದರೆ ಇದೀಗ ಆ ಮೂವರು ಬಿಜೆಪಿ ಲಕ್ಕಿ ಶಾಸಕರು ಯಾರು..? ಅನ್ನೋ ಚರ್ಚೆ ಶುರುವಾಗಿದೆ. ಒಪ್ಪಿಗೆ ಸಿಕ್ಕಿರುವ ಪಟ್ಟಿಯಲ್ಲಿ ಇರುವ ಆ ಮೂರು ಹೆಸರುಗಳು ಹೈಕಮಾಂಡ್ ಕೃಪೆಯೋ..? ಸ್ವತಃ ಯಡಿಯೂರಪ್ಪ ಕೃಪೆಯೋ ಅನ್ನೋದು ಇಂದು ಸಂಜೆಯೊಳಗೆ ಗೊತ್ತಾಗಲಿದೆ.

ಅಂದಹಾಗೆ ಗೆದ್ದ ವಲಸಿಗ 10 ಶಾಸಕರ ಬಗ್ಗೆ ಹೈಕಮಾಂಡ್ ಕ್ಲಿಯರೆನ್ಸ್ ಕೊಟ್ಟಿದೆ. ಮೂವರು ಮೂಲ ಬಿಜೆಪಿಗರ ಕೋಟಾಕ್ಕೆ ಹೈಕಮಾಂಡ್ ಒಪ್ಪಿಗೆ ಸಿಕ್ಕಿದೆ. ಆ ಮೂವರು ಹೆಸರನ್ನ ಇಂದು ಸಂಜೆ ತನಕ ಬಹಿರಂಗಗೊಳಿಸದೇ ರಹಸ್ಯ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆ ಮೂರು ಸ್ಥಾನಗಳಿಗೆ ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಸಿ.ಪಿ.ಯೋಗೇಶ್ವರ್, ಹಾಲಪ್ಪ ಆಚಾರ್ ಹೆಸರುಗಳು ಮಚೂಣಿಯಲಿವೆ. ಲಿಂಬಾವಳಿ, ಕತ್ತಿಗೆ ಪಕ್ಕಾ ಎನ್ನಲಾಗ್ತಿದ್ದು, ಆದ್ರೆ ಉಳಿದ ಒಂದು ಹೆಸರಿನ ಬಗ್ಗೆ ಸಿಎಂ ಯಡಿಯೂರಪ್ಪ ಇವತ್ತು ತೀರ್ಮಾನ ಮಾಡುವ ಸಾಧ್ಯತೆ ಇದೆ.

ಈ ನಡುವೆ ಗೆದ್ದ ಶಾಸಕರಲ್ಲಿ ಒಬ್ಬರು ಕೂರಬೇಕಾದ ಸ್ಥಿತಿ ಇದೆ. ಯಡಿಯೂರಪ್ಪ ಕ್ಯಾಬಿನೆಟ್‍ನಿಂದ ಹೊರಗುಳಿಯುವ ಓರ್ವ ಶಾಸಕ ಯಾರು ಅನ್ನೋ ಕುತೂಹಲವೂ ಇದೆ. ಕಾಗವಾಡ ಶಾಸಕ ಶ್ರೀಮಂತಗೌಡ ಪಾಟೀಲ್, ಅಥಣಿ ಶಾಸಕ ಮಹೇಶ್ ಕುಮಟಹಳ್ಳಿ ಇಬ್ಬರಲ್ಲಿ ಒಬ್ಬರಿಗೆ ಅದೃಷ್ಟ ಕುದರುವ ಸಾಧ್ಯತೆ ಇದೆ. ಇಂದು ಸಂಜೆಯೊಳಗೆ ಗೆದ್ದವರಲ್ಲಿ ಒಬ್ಬರು ಹೊರಗುಳಿಯುವ ಬಗ್ಗೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ