ಗಣರಾಜ್ಯೋತ್ಸವ ಸಂಭ್ರಮ: ಮಾಣಿಕ್ ಶಾ ಮೈದಾನದಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ

ಬೆಂಗಳೂರು: 71ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ವಜುಭಾಯಿ ವಾಲ ಅವರು ಧ್ವಜಾರೋಹಣ ಮಾಡಿದರು.

ಬೆಳಿಗ್ಗೆ 9 ಗಂಟೆಗೆ ರಾಜ್ಯಪಾಲರು ತ್ರಿವರ್ಣ ಧ್ವಜಾರೋಹಣ ಮಾಡಿದರು. ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಹೆಲಿಕಾಪ್ಟರ್ ನಲ್ಲಿ ಪುಷ್ಪವೃಷ್ಟಿ ಮಾಡಲಾಯಿತು.

ಸಮಾರಂಭ ನಡೆಯುತ್ತಿರುವ ಮಾಣಿಕ್ ಶಾ ಮೈದಾನದ ಸುತ್ತ ಮುತ್ತ ಬಿಗು ಭದ್ರತೆ ವಹಿಸಲಾಗಿದೆ.

ರಾಜ್ಯಪಾಲ ವಜುಭಾಯಿ ವಾಲ ಅವರು ಗಣರಾಜ್ಯೋತ್ಸವ ಸಂದೇಶ ಭಾಷಣದಲ್ಲಿ ಮೊದಲಾಗಿ ರಾಜ್ಯದ ಎಲ್ಲರಿಗೂ ಗಣರಾಜ್ಯೋತ್ಸವ ದಿನದ ಶುಭಾಶಯ ಕೋರಿದರು. ಕರ್ನಾಟಕ ರಾಜ್ಯದ ಉತ್ತಮ ಆಡಳಿತದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದರು. ಮಹಿಳೆಯರಿಗೆ ನಿರ್ಭಿತ ವಾತಾವರಣ ಸೃಷ್ಟಿಸಬೇಕು. ಈ ಮೂಲಕ ಮಹಾತ್ಮ  ಗಾಂಧೀಜಿಯವರ ಕನಸು ನನಸು ಮಾಡಬೇಕು ಎಂದರು.

ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಲು ರಾಜ್ಯ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಹಿಳಾ ಸುರಕ್ಷಿತೆಗೆ, ಸರ್ವರ ಸ್ವಾಭಿಮಾನದ ಬದಕು ಖಾತರಿಗೊಳಿಸಬೇಕಾಗಿದೆ. 2019ರ ಆಗಸ್ಟ್‌ನಲ್ಲಿ ಉಂಟಾದ ಪ್ರವಾಹ ಪಿಡೀತ ಪ್ರದೇಶಗಳ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಪೂರ್ಣ ಪ್ರಮಾಣದ ನೆರವು ಒದಗಿಸಿದೆ ಎಂದು ರಾಜ್ಯಪಾಲರು ಹೇಳಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ