ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ರಾಜ್ಪಥ್ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಧ್ವಜಾರೋಹಣ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಹುತಾತ್ಮ ಯೋಧರಿಗೆ ಯುದ್ಧ ಸ್ಮಾಕರದ ಬಳಿ ನಮನ ಸಲ್ಲಿಸಲಿದ್ದರು
ರಾಜ್ಪಥ್ನಿದಿಂದ ಇಂಡಿಯಾ ಗೇಟ್ ತನಕ ಸೇನಾ ಪರೇಡ್ ನಡೆಯಿತು. ಈ ಮೂಲಕ ಸೇನೆಯ ಶಕ್ತಿ ಅನಾವರಣಗೊಂಡಿತು. ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ 10 ಗಂಟೆಯಿಂದ ಪಥಸಂಚಲನ ಆರಂಭವಾಯಿತು. ಈ ಬಾರಿ ಪಥಸಂಚಲನದಲ್ಲಿ ಒಟ್ಟು 22 ಸ್ತಬ್ಧ ಚಿತ್ರಗಳು ಸಾಗಿದವು. 16 ರಾಜ್ಯಗಳ ಸ್ತಬ್ಧಚಿತ್ರ ಹಾಗೂ 6 ಕೇಂದ್ರ ಸರ್ಕಾರದ ವಿವಿಧ ಸ್ತಬ್ಧಚಿತ್ರ ರಾಜ್ಪಥ್ನಲ್ಲಿ ಸಾಗಿದ್ದು ವಿಶೇಷ.
ಭಾರತ ಸೇನೆಯ ಕ್ಷಿಪಣಿಗಳು, ಕ್ಷಿಪಣಿ ವಾಹನಗಳು, ವೀರಯೋಧರ ಸಾಹಸ ಪ್ರದರ್ಶನ ನಡೆಯಿತುದೆ. ಜೊತೆಗೆ ಭಾರತ ಸೇನೆಗೆ ಇತ್ತೀಚೆಗೆ ಸೇರ್ಪಡೆಯಾದ ಚಿನೂಕ್ ಮತ್ತು ಅಪಾಚೆ ಹೆಲಿಕಾಪ್ಟರ್ ಆಗಸದಲ್ಲಿ ಕಸರತ್ತು ನಡೆಸಿದವು. ಮಿಷನ್ ಶಕ್ತಿ’.. ಭೀಷ್ಮ ಟ್ಯಾಂಕರ್ ರಾಜಪಥ್ನಲ್ಲಿ ಘರ್ಜಿಸಿತು.
ಗಣರಾಜ್ಯೋತ್ಸವಕ್ಕೆ ಉಗ್ರರ ಬೆದರಿಕೆ ಇರೋ ಹಿನ್ನಲೆಯಲ್ಲಿ 20 ಸಾವಿರಕ್ಕೂ ಹೆಚ್ಚು ಪೊಲೀಸರು, ಮಿಲಿಟರಿ ಪಡೆ, ಎನ್ಎಸ್ಜಿ ಪಡೆಗಳು ಭದ್ರತೆ ಒದಗಿಸಿದ್ದವು. ಬೆಳಗ್ಗೆ 10 ರಿಂದ 12.30ರವರೆಗೆ ದೆಹಲಿಯಿಂದ ಯಾವ ವಿಮಾನಗಳು ಹಾರಾಟ ನಡೆಸಲಿಲ್ಲ.. ಪ್ರಮುಖ ಸ್ಥಳಗಳಲ್ಲೆಲ್ಲಾ ಸಾವಿರಾರು ಸಿಸಿಕ್ಯಾಮೆರಾಗಳನ್ನ ಅಳವಡಿಸಲಾಗಿತ್ತು.