ರಾಜ್ಯದ ಅತೀ‌ ಶ್ರೀಮಂತ ದೇವಾಲಯ ಯಾವುದು?; ಇಲ್ಲಿದೆ ಮುಜರಾಯಿ ಇಲಾಖೆ ಪಟ್ಟಿ ಮಾಡಿರುವ ಟಾಪ್ 10 ಸಿರಿವಂತ ದೇಗುಲಗಳ ಪಟ್ಟಿ!

ಬೆಂಗಳೂರು; ರಾಜ್ಯದಲ್ಲಿ ಸರ್ಕಾರಕ್ಕೆ ಅತಿಹೆಚ್ಚು ಆದಾಯ ತರುವ ದೇವಾಲಯಗಳ ಟಾಪ್​10 ಪಟ್ಟಿಯನ್ನು ಮುಜರಾಯಿ ಇಲಾಖೆ ಸಿದ್ದಪಡಿಸಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ದೇವಾಲಯ ಗಳಿಸಿರುವ ಆದಾಯದ ಎಷ್ಟು? ಎಂಬ ಆಧಾರದಲ್ಲಿ ಪಟ್ಟಿ ಸಿದ್ದಪಡಿಸಲಾಗಿದೆ

ಮುಜರಾಯಿ ಇಲಾಖೆ ಪಟ್ಟಿ ಮಾಡಿರುವ ರಾಜ್ಯದ ಅತ್ಯಂತ ಶ್ರೀಮಂತ ದೇವಾಲಯ ಯಾವುದು? ಆ ದೇವಾಲಯದ ಆದಾಯ ಎಷ್ಟು? ಇಲ್ಲಿದೆ ಪಟ್ಟಿ.

1. ಕುಕ್ಕೆ ಸುಬ್ರಮಣ್ಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಕಳೆದ ವರ್ಷ ಬರೋಬ್ಬರಿ 100 ಕೋಟಿ ಆದಾಯ ಗಳಿಸಿದೆ.

2. 90-92 ಕೋಟಿ ಆದಾಯಗಳಿಸಿರೋ ಕೊಲ್ಲೂರು ಮೂಕಾಂಬಿಕೆ ಎರಡನೇ ಸ್ಥಾನದಲ್ಲಿದೆ.

3. ಕಟೀಲು ದುರ್ಗಾ ಪರಮೇಶ್ವರಿ 40-42 ಕೋಟಿ ಆದಾಯ.

4. ಚಾಮುಂಡೇಶ್ವರಿ ದೇವಾಲಯ 30-33 ಕೋಟಿ

5. ನಂಜನಗೂಡು ಶ್ರೀಕಂಠೇಶ್ವರ ದೇವಾಲಯ 15-20 ಕೋಟಿ6. ಸವದತ್ತಿ ಯಲ್ಲಮ್ಮ ದೇವಾಲಯ 15-17 ಕೋಟಿ

7. ಮಂದರ್ತಿ ದೇವಾಲಯ 10-12 ಕೋಟಿ

8. ಗುಳ್ಳಮ್ಮನ ದೇವಾಲಯ 08-10 ಕೋಟಿ

9. ಘಾಟಿ ಸುಬ್ರಮಣ್ಯ ದೇವಾಲಯ 08-10 ಕೋಟಿ ಆದಾಯ

10. 08-10 ಕೋಟಿ ಆದಾಯಗಳಿಸೋ ಮೂಲಕ ಬೆಂಗಳೂರಿನ ಬನಶಂಕರಿ ದೇವಾಲಯ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ