ಹೊಸದಿಲ್ಲಿ: ದಿಲ್ಲಿಯ ಪಟಿಯಾಲಾ ನ್ಯಾಯಾಲಯದ ಆದೇಶದಂತೆ ನಿರ್ಭಯಾ ಪ್ರಕರಣದ ನಾಲ್ವರು ಹಂತಕರನ್ನು ಗಲ್ಲಿಗೇರಿಸಿದರೆ ಅಂಥ ಪ್ರಕರಣ ನಡೆದಿದ್ದು ದೇಶದಲ್ಲಿ ಎರಡನೆಯದ್ದು ಎಂದೆನಿಸಿ ಕೊಳ್ಳಲಿದೆ.
70ರ ದಶಕದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ‘ಜೋಷಿ-ಅಭ್ಯಂಕರ್ ಸರಣಿ ಹತ್ಯೆ ಪ್ರಕರಣ’ದ ಅಪರಾಧಿಗಳಾದ ರಾಜೇಂದ್ರ ಜಕ್ಕಲ್, ದಿಲೀಪ್ ಸುತಾರ್, ಶಾಂತಾರಾಮ್ ಕನ್ಹೋಜಿ ಜಗದೀಪ್ ಹಾಗೂ ಮುನಾವರ್ ಹರುಣ್ ಶಾ ಎಂಬವರಿಗೆ ಪುಣೆಯ ಯರವಾಡ ಕೇಂದ್ರ ಕಾರಾಗೃಹದಲ್ಲಿ 1983ರ ಅ. 25ರಂದು ಗಲ್ಲು ಶಿಕ್ಷೆ ಜಾರಿಗೊಳಿಸಲಾಗಿತ್ತು.