ನವದೆಹಲಿ: ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಒಬ್ಬ ಆಟಗಾರನು ಕುದುರೆ ಸವಾರಿಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಫವಾದ್ ಮಿರ್ಜಾ ಟೋಕಿಯೊ ಒಲಿಂಪಿಕ್ಸ್ 2020 ರ ಸ್ಥಾನ ಪಡೆದಿದ್ದಾರೆ. ಅವರು 20 ವರ್ಷಗಳಲ್ಲಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಮೊದಲ ಭಾರತೀಯ ಕುದುರೆ ಸವಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಒಲಿಂಪಿಕ್ ಇಕ್ವೆಸ್ಟ್ರಿಯನ್‌ನಲ್ಲಿ ಭಾರತದ ಪರವಾಗಿ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ, ಇದು ನನಗೆ ಬಹಳ ಸಂತಸ ತಂದಿದೆ ಎಂದು ಫವಾದ್ ಮಿರ್ಜಾ ಹೇಳಿದ್ದಾರೆ. ಈ ಹಿಂದೆ ಅವರು ಏಷ್ಯನ್ ಕ್ರೀಡಾಕೂಟದಲ್ಲಿ 36 ವರ್ಷದ ಪದಕಗಳ ಬರವನ್ನು ಕೊನೆಗೊಳಿಸಿದ್ದರು.
ಫವಾದ್ ಮಿರ್ಜಾ ಕಳೆದ ವರ್ಷ ನವೆಂಬರ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡಲು ನಿರ್ಧರಿಸಲಾಗಿತ್ತು, ಆದರೆ ಅದನ್ನು ಅಧಿಕೃತವಾಗಿ ಘೋಷಿಸಲಾಗಿರಲಿಲ್ಲ. ಇದೀಗ ಅಂತಾರಾಷ್ಟ್ರೀಯ ಈಕ್ವಟೋರಿನ್ ಫೆಡರೇಶನ್ (ಎಫ್‌ಇಐ) ತನ್ನ ಶ್ರೇಯಾಂಕವನ್ನು ಬಿಡುಗಡೆ ಮಾಡಿದ್ದು, ಮಂಗಳವಾರ ಈ ಘೋಷಣೆ ಮಾಡಲಾಗಿದೆ. ಆಗ್ನೇಯ ಏಷ್ಯಾ-ಓಷಿಯಾನಿಯಾ ವಲಯದಲ್ಲಿ ಅತಿ ಹೆಚ್ಚು ಒಲಿಂಪಿಕ್ ಅರ್ಹತಾ ಅಂಕಗಳನ್ನು ಗಳಿಸಿದ ರೈಡರ್ ಆಗಿ ಫವಾದ್ ಹೊರಹೊಮ್ಮಿದರು.
ಫವಾದ್‌ಗೂ ಮೊದಲು, ಭಾರತದ ಇಬ್ಬರು ಅಶ್ವದಳದ ವಿಭಾಗದ ಕಮಾಂಡರ್‌ಗಳಾದ ಐಜೆ ಲಾಂಬಾ (1996) ಮತ್ತು ಇಮ್ತಿಯಾಜ್ ಅನೀಸ್ (2000) ಮಾತ್ರ ಈಕ್ವಟೋರಿಯನ್‌ನಲ್ಲಿ ಭಾರತಕ್ಕೆ ಒಲಿಂಪಿಕ್ ಕೋಟಾವನ್ನು ಪಡೆದಿದ್ದರು. ಇದೀಗ ಸ್ಥಾನ ಪಡೆದಿರುವ ಫವಾದ್ ಮಿರ್ಜಾ, ‘ಈ ವರ್ಷ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸ್ಥಾನ ಸಿಕ್ಕಿರುವುದು ನನಗೆ ಸಂತೋಷವಾಗಿದೆ. ಇದು ನನಗೆ ಹೆಮ್ಮೆಯ ವಿಷಯ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ಇಡೀ ಪ್ರಕ್ರಿಯೆಯ ಒಂದು ಭಾಗವಾಗಿದೆ’ ಎಂದು ತಿಳಿಸಿದರು.