ಬೆಂಗಳೂರು: ತನ್ನ ದೇಶದ ಮೇಜರ್ ಜನರಲ್ ಖಾಸಿಮ್ ಸುಲೇಮಾನಿ ಹತ್ಯೆಗೈದ ಅಮೆರಿಕದ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಇರಾನ್ ಪ್ರತೀಕಾರ ತೀರಿಸಿಕೊಳ್ಳಲು ಯತ್ನಿಸಿದೆ. ರಾಜಧಾನಿ ಬಾಗ್ದಾದ್ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲೆ ಇರಾನ್ ದಾಳಿ ನಡೆಸಿರುವುದೀಗ ಮೂರನೇ ಮಹಾಯುದ್ಧ ನಡೆಯಲಿದೆ ಎನ್ನುವ ಮಾತುಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಈ ಎರಡು ದೇಶಗಳ ನಡುವಿನ ಸಂಘರ್ಷವೂ ಇರಾಕ್ನಲ್ಲಿ ನೆಲೆಸಿರುವ ಭಾರತೀಯರಿಗೆ ಆತಂಕ ಮೂಡಿಸಿದೆ. ಭಾರತ ಮೂಲದ ಯುಎನ್ ರಾಯಭಾರಿ(ಹೆಸರು ಹೇಳಲು ಇಚ್ಛಿಸದ) ಹೇಳುವ ಪ್ರಕಾರ, ಇರಾಕ್ನಲ್ಲಿ ನೆಲೆಸಿರುವ ಭಾರತೀಯರಿಗೆ ಯಾವುದೇ ತೊಂದರೆಯಿಲ್ಲ ಎಂಬುದು ಖಾತ್ರಿಯಾಗಿದೆ. ಇರಾಕ್ನ ಮೂಲಸೌಕರ್ಯ ಮತ್ತು ತೈಲ ವಲಯದಲ್ಲಿ ಸುಮಾರು 25 ಸಾವಿರ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಇರಾಕ್ನ ಕುರ್ದಿಸ್ತಾನ್ ರಾಜಧಾನಿ ಎರ್ಬಿಲ್ನಲ್ಲೇ ಹೆಚ್ಚು ಭಾರತೀಯರು ನೆಲೆಸಿದ್ದು, ವ್ಯಾಪರದಲ್ಲಿ ತೊಡಗಿಸಿಕೊಂಡಿದ್ದಾರೆ. ಬಹುತೇಕರು ಸಣ್ಣ ಉದ್ದಿಮೆಗಳಾಗಿದ್ದಾರೆ.
ಭಾರತದ ಬಹುತೇಕ ಕೌಶಲ್ಯರಹಿತ ಕಾರ್ಮಿಕರು ಇರಾನ್ನ ಬಾದ್ದಾದ್ ಮತ್ತು ಬಸ್ರಾ ಪ್ರಾಂತ್ಯದಲ್ಲಿ ಮೂಲಸೌಕರ್ಯ ಮತ್ತು ತೈಲ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಇರಾನ್ನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಬಿಗಡಾಯಿಸಿದೆ. ಭಾರತೀಯರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಖಾತ್ರಿಪಡಿಸುತ್ತೇನೆ. ಖುದ್ದು ನಾನೇ ಇರಾಕ್ನ ಭಾರತದ ರಾಯಭಾರಿಯಿಂದ ಈ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅಮೆರಿಕದಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಭಾರತ ಮೂಲದ ಯುಎನ್ ರಾಯಭಾರಿ ಫೋನ್ ಮೂಲಕ ಮಾಹಿತಿ ನೀಡಿದ್ದಾರೆ.
ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಇರಾಕ್ಗೆ ಭಾರತೀಯರನ್ನು ಕಳಿಸಬೇಡಿ ಎಂದು ಭಾರತದ ರಾಯಭಾರಿಗೆ ಯುನ್ ಅನಧಿಕೃತ ಸಲಹೆ ನೀಡಿದೆ. ಅಲ್ಲದೇ ಇಲ್ಲಿನ ಪರಿಸ್ಥಿತಿ ಅವಲೋಕಿಸುತ್ತಿದ್ದು, ಶೀಘ್ರದಲ್ಲೇ ಒಂದು ನಿರ್ಧಾರಕ್ಕೆ ಬರುವುದಾಗಿಯೂ ಯುಎನ್ ತಿಳಿಸಿದೆ.
ಯುಎನ್ ರಾಯಭಾರಿ ಪ್ರಕಾರ, ತೈಲ ವಲಯದಲ್ಲಿರುವ ಉತ್ತಮ ಸಂಬಳದ ನೌಕರರನ್ನು ಹೊರತುಪಡಿಸಿ ಉಳಿದವರೆಲ್ಲರೂ ಅರೆಕೌಶಲ್ಯ ಮತ್ತು ಕೌಶಲ್ಯರಹಿತ ಕಾರ್ಮಿಕರು ಆಗಿದ್ದಾರೆ.
ಎಬ್ರಿಲ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಈ ಪೈಕಿ ಕೆಲವರು ಆಮದು ಮತ್ತು ರಫ್ತು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕುರ್ದಿಸ್ತಾನ್ ಸುರಕ್ಷಿತ ಸ್ಥಳ, ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಎಬ್ರಿಲ್ನಲ್ಲಿ ಮಾತ್ರ ಹೆಚ್ಚಿನ ದಾಳಿಗಳು ನಡೆಯುತ್ತವೆ. ಹಾಗಾಗಿ ಇಲ್ಲಿನ ಭಾರತೀಯರಿಗೆ ಸಹಜವಾಗಿ ಆಂತಕ ಸೃಷ್ಟಿಸಿಯಾಗಿದೆ ಎಂದರು ಯುಎನ್ ರಾಯಭಾರಿ.
2014ರಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಐಸಿಸ್) ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿದ್ದ 40 ಭಾರತೀಯರು ಹತ್ಯೆಗೀಡಾಗಿದ್ದರು. 40 ಭಾರತೀಯ ಕಾರ್ಮಿಕರು ಇರಾಕ್ನ ಮೊಸುಲ್ನಲ್ಲಿ ಹತ್ಯೆಗೀಡಾದ ಬಳಿಕ ಅಂತಹ ಯಾವುದೇ ದುರಂತ ಇಲ್ಲಿಯವರೆಗೂ ಸಂಭವಿಸಿಲ್ಲ. ಆದರೀಗ ಒಂದು ವೇಳೆ ಅಮೆರಿಕ ಮತ್ತು ಇರಾನ್ ನಡುವಿ ಸಂಘರ್ಷವೂ ಮತ್ತಷ್ಟು ತಾರಕಕ್ಕೇರಿದರೆ, ಐಸಿಸ್ ಮತ್ತೆ ವಾಪಸ್ಸು ಬರಬಹುದು. ಇಂತಹ ಅನಾಹುತಗಳು ಮರುಕಳಿಸಬಹುದು ಎಂದರೆ ಅತಿಶಯೋಕ್ತಿಯಾಗಲಾರದು.
ಇರಾಕ್ನಲ್ಲಿ ಮತ್ತೆ ಸಂಘರ್ಷ ಶುರುವಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಜನವರಿ 7ನೇ ತಾರೀಕು ಸಂಜೆ 5.30ರ ಸುಮಾರಿಗೆ ಇರಾನ್ 12ಕ್ಕೂ ಹೆಚ್ಚು ಮಿಸೈಲ್ಗಳನ್ನು ಹಾರಿಸಿದೆ. ಇರಾನ್ನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಸದ್ಯ ಉಭಯ ರಾಷ್ಟ್ರಗಳ ನಡುವಣ ಪ್ರಕ್ಷುಬ್ದ ಪರಿಸ್ಥಿತಿ ಬಿಗಡಾಯಿಸಿದ್ದು, ಇರಾಕ್ನವರಿಗೆ ತೀವ್ರ ಕಳವಳ ವ್ಯಕ್ತವಾಗುತ್ತಿದೆ. ಎಬ್ರಿಲ್ ಸದ್ಯ ಸುರಕ್ಷಿತ ಸ್ಥಳ ಎಂದೇಳಲಾಗುತ್ತಿದೆ. ಆದರೂ, ಈ ಸ್ಥಳಗಳನ್ನು ನಾವು ಗುರಿಯಾಗಿಸಿಕೊಂಡಿದ್ದೇವೆ ಎಂದು ಇರಾನ್ ತನ್ನ ಇಸ್ಲಾಮಿಕ್ ರೆವಲೂಷನರಿ ಗಾರ್ಡ್ಸ್ ಕಾರ್ಪ್ಸ್(ಐಆರ್ಜಿಸಿ) ಮೂಲಕ ಹೇಳಿಕೆ ಬಿಡುಗಡೆ ಮಾಡಿದೆ. ಸದ್ಯ ಸಂಘರ್ವವೂ ಮತ್ತಷ್ಟು ತಾರಕಕ್ಕೇರುವ ಸಾಧ್ಯತೆಯಿದ್ದು, ಏನು ಬೇಕಾದರೂ ಆಗಬಹುದು ಎಂದು ಯುಎನ್ ರಾಯಭಾರಿ ಆತಂಕ ವ್ಯಕ್ತಪಡಿಸಿದ್ಧಾರೆ.