
ಟೆಹ್ರಾನ್/ವಾಷಿಂಗ್ಟನ್: ಇರಾಕ್ ನಲ್ಲಿರುವ ಅಮೆರಿಕ ಮೈತ್ರಿ ಪಡೆಗಳ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿದ ಬೆನ್ನಲ್ಲೇ ತೈಲ ಬೆಲೆ ಏರಿಕೆಯಾಗತೊಡಗಿದೆ ಎಂದು ವರದಿ ತಿಳಿಸಿದೆ.
ಬ್ರೆಂಟ್ ಕಚ್ಚಾ ತೈಲ ಬೆಲೆಯಲ್ಲಿ ಶೇ.5ರಷ್ಟು ಏರಿಕೆಯಾಗಿದ್ದು, ಏಷಿಯನ್ ವ್ಯಾಪಾರದಲ್ಲಿ ಒಂದು ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ ಬೆಲೆ 73.21 ಡಾಲರ್ ನಷ್ಟು ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.
ಕಳೆದ ಒಂದು ದಶಕದಲ್ಲಿ ಅಮೆರಿಕದ ತೈಲ ಉತ್ಪನ್ನ ಎರಡಷ್ಟು ಹೆಚ್ಚಾಗಿದ್ದು, ಒಂದು ದಿನಕ್ಕೆ 13 ಮಿಲಿಯನ್ ಬ್ಯಾರೆಲ್ಸ್ ಗಿಂತಲೂ ಹೆಚ್ಚು ತೈಲ ಉತ್ಪಾದಿಸುತ್ತಿದೆ ಎಂದು ತಿಳಿಸಿದೆ. ತೈಲ ಉತ್ಪಾದನೆಯಲ್ಲಿ ಅಮೆರಿಕ ಈಗ ಮೊದಲ ಸ್ಥಾನದಲ್ಲಿದೆ.
ಅಮೆರಿಕ ಪಡೆಗಳ ಮೇಲೆ ಇರಾನ್ ದಾಳಿ ನಡೆಸಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಚಿನ್ನ ಮತ್ತು ಜಪಾನ್ ಯೆನ್ ಬೆಲೆಗಳು ಏರಿಕೆ ಕಂಡಿದೆ. ಈ ಸಂದರ್ಭದಲ್ಲಿ ಜಾಗತಿಕ ಶೇರುಮಾರುಕಟ್ಟೆ ಸೆನ್ಸೆಕ್ಸ್ ಸೂಚ್ಯಂಕ ಇಳಿಕೆಯಾಗಿದೆ ಎಂದು ವರದಿ ವಿವರಿಸಿದೆ.