
ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ದೇಶವ್ಯಾಪಿ ಮುಷ್ಕರಕ್ಕೆ ರಾಜ್ಯದಲ್ಲಿ ಕಾರ್ಮಿಕ ಸಂಘಟನೆಗಳಿಂಗ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಹಲವೆಡೆ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಬಂದ್ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯಗಳು ಕಂಡು ಬರುತ್ತಿದ್ದು, ಇನ್ನುಳಿದಂತೆ ಕೆಲ ಸಂಘಟನೆಗಳು ಹಾಗೂ ಸಂಸ್ಥೆಗಳು ನೈತಿಕ ಬೆಂಬಲ ಸೂಚಿಸಿದ್ದರಿಂದಾಗಿ ತಮ್ಮ ಸೇವೆಗಳನ್ನು ಎಂದಿನಂತೆ ಮುಂದುವರೆಸಿವೆ. ಮುಷ್ಕರದ ಹೊರತಾಗಿಯೂ ಜನಜೀವನ ಎಂದಿನಂತೆ ಸಾಗುತ್ತಿರುವುದು ಕಂಡು ಬರುತ್ತಿವೆ.
ಇನ್ನು ಶಾಲಾ, ಕಾಲೇಜುಗಳು ಪರಿಸ್ಥಿತಿ ಆಧರಿಸಿ ರಜೆ ಘೋಷಣೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಜಿಲ್ಲಾಧಿಕಾರಿುಗಳಿಗೆ ಸರ್ಕಾರ ನೀಡಿದ್ದು, ಸಾರಿಗೆ ಸೇವೆಯಲ್ಲಿ ಆಟೋ ಸಂಘಟನೆಗಳ ಹೊರತಾಗಿ ಉಳಿದೆಲ್ಲವೂ ಕೇಲವ ನೈತಿಕ ಬೆಂಬಲ ನೀಡಿವೆ. ಹೀಗಾಗಿ ಬಸ್, ಮೆಟ್ರೋ, ಕ್ಯಾಬ್ ಸೇರಿದಂತೆ ಸಾರಿಗೆ ಸೇವೆ ಸಾಮಾನ್ಯವಾಗಿರಬಹುದು. ಆಟೋ ಸೇವೆಯಲ್ಲಿ ಕೊಂಚ ವ್ಯತ್ಯಗಳು ಕಂಡು ಬರುತ್ತಿವೆ.
ಇನ್ನುಳಿದಂತೆ ಹೋಟೆಲ್, ಆಸ್ಪತ್ರೆ, ಆ್ಯಂಬುಲೆನ್ಸ್ ಔಷಧ, ದಿನಸಿ ಹಾಗೂ ತರಕಾರಿ ಮಾರುಕಟ್ಟೆ ಹಾಲು ಸೇರಿದಂತೆ ಸರಕು ಸಾಗಣೆ ಸಾಮಾನ್ಯವಾಗಿವೆ.
ಕೆಎಸ್ಆರ್’ಟಿಸಿ, ಬಿಎಂಟಿಸಿ ಸೇರಿದಂತೆ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಆದರೆ, ಬಸ್ ಸೇವೆಯಲ್ಲಿ ವ್ಯತ್ಯಯಗಳು ಕಂಡು ಬಂದಿಲ್ಲ. ಮೆಟ್ರೋ ರೈಲು, ಮೊಬೈಲ್ ಆ್ಯಪ್ ಆಧಾರಿತ ಓಲಾ, ಉಬರ್, ಪ್ರವಾಸಿ ವಾಹನಗಳು, ಸರಕು ಸಾಗಣೆ ಲಾರಿ ಮಾಲೀಕರ ಸಂಘಟನೆಗಳು ಮುಷ್ಕರಕ್ಕೆ ಬಾಹ್ಯ ಬೆಬಲ ಮಾತ್ರ ಗೋಷಮೆ ಮಾಡಿವೆ. ರಾಜಧಾನಿ ಬೆಂಗಳೂರಿನಲ್ಲಿ ಆಟೋರಿಕ್ಷಾ ಚಾಲಕರ ಸಂಘಟನೆಗಳ ಪೈಕಿ ಕೆಲ ಸಂಘಟನೆಗಳು ಬೆಂಬಲ ಸೂಚಿಸಿ ಸೇವೆ ಸ್ಥಗಿತಗೊಳಿಸಲು ತೀರ್ಮಾನಿಸಿವೆ.