ದುಬೈ: ಉಕ್ರೇನ್ ಇಂಟರ್ನ್ಯಾಷನಲ್ ಏರ್ಲೈನ್ಸ್ಗೆ ಸೇರಿದ ಬೋಯಿಂಗ್ 737 ಎಂಬ ವಿಮಾನ ಇರಾನ್ನ ಇಮಾಮ್ ಖೊಮೈನಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಪತನವಾಗಿದೆ. ವಿಮಾನದಲ್ಲಿದ್ದ 176 ಪ್ರಯಾಣಿಕರೂ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಈ ವಿಮಾನದಲ್ಲಿ 167 ಪ್ರಯಾಣಿಕರು ಮತ್ತು 9 ಜನ ವಿಮಾನದ ಸಿಬ್ಬಂದಿಯಿದ್ದರು. ಇರಾನ್ ದೇಶದ ತೆಹ್ರಾನ್ ಏರ್ಪೋರ್ಟ್ನಿಂದ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನ ಪತನವಾಗಿದೆ. ಆಕಾಶದಲ್ಲಿಯೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ವಿಮಾನ ಪತನವಾಗಿದೆ. ಈ ಘಟನೆಗೆ ವಿಮಾನದಲ್ಲಿ ಉಂಟಾದ ತಾಂತ್ರಿಕ ತೊಂದರೆಯೇ ಕಾರಣ ಎನ್ನಲಾಗಿದೆ.
ಈ ದುರಂತಕ್ಕೆ ಉಕ್ರೇನ್ ದೇಶದ ಪ್ರಧಾನಿ ವೊಲೋಡಿಮೈರ್ ಜೆಲೆನ್ಸ್ಕೀ ಸಂತಾಪ ಸೂಚಿಸಿದ್ದಾರೆ. ಇರಾನ್ ಸೇನಾ ಮುಖ್ಯಸ್ಥ ಖಾಸಿಂ ಸುಲೇಮನಿ ಅವರನ್ನು ಇರಾಕ್ನಲ್ಲಿ ಅಮೆರಿಕ ವಾಯುದಾಳಿ ನಡೆಸಿ ಹತ್ಯೆ ನಡೆಸಿದ ಬೆನ್ನಲ್ಲೇ ಈ ದುರ್ಘಟನೆ ನಡೆದಿದೆ.