ಗೋಲ್ಡನ್‍ಗ್ಲೋಬ್-2020 ಪ್ರಶಸ್ತಿ- ಯುದ್ಧ ಕುರಿತ 1917 ಅತ್ಯುತ್ತಮ ಚಿತ್ರ

ಬೆವರ್ಲಿಹಿಲ್ಡ್ (ಅಮೆರಿಕ), ಜ.6- ಹಾಲಿವುಡ್‍ನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಗೋಲ್ಡನ್‍ಗ್ಲೋಬ್-2020 ಪ್ರಶಸ್ತಿಗಳನ್ನು ನೀಡಲಾಗಿದ್ದು, (ಡ್ರಾಮಾ) ಪ್ರಶಸ್ತಿಗಳಿಸಿದೆ. ಇದೇ ಚಿತ್ರಕ್ಕಾಗಿ ಸ್ಯಾಮ್ ಮೆಂಡಿಸ್ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಯನ್ನು ಗಳಿಸಿದರು. ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್ (ಮ್ಯೂಸಿಕಲ್ ಅಥವಾ ಕಾಮಿಡಿ ವಿಭಾಗ) ಸಿನಿಮಾ ಒಟ್ಟು ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ವಿಶ್ವಾದ್ಯಂತ ಭರ್ಜರಿ ಸುದ್ದಿಯಾಗಿ ಸೂಪರ್‍ಹಿಟ್ ಆದ ಜೋಕರ್ ಚಿತ್ರದ ಅದ್ಭುತ ಅಭಿನಯಕ್ಕಾಗಿ ಜೋವಾಕ್ವಿನ್ ಫಿನಿಕ್ಸ್ ಶ್ರೇಷ್ಠ ನಟ ಹಾಗೂ ಜೂಡಿ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ರೀನಿ ಝೆಲ್‍ವೆಗರ್ ಶ್ರೇಷ್ಠ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆವರ್ಲಿ ಹಿಲ್ಸ್‍ನಲ್ಲಿ ನಿನ್ನೆ ರಾತ್ರಿ ನಡೆದ ಅತ್ಯಂತ ವರ್ಣರಂಜಿತ ಸಮಾರಂಭದಲ್ಲಿ ಹಾಲಿವುಡ್‍ನ ಪ್ರತಿಬಾವಂತರಿಗೆ ಈ 77ನೇ ವಾರ್ಷಿಕ ಗೋಲ್ಡನ್ ಗ್ಲೋಬ್ ಪ್ರಶಸ್ತಿ-ಪುರಸ್ಕಾರಗಳನ್ನು ನೀಡಲಾಯಿತು.

ಬಾಲಿವುಡ್-ಹಾಲಿವಡ್ ನಟಿ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕ ಖ್ಯಾತನಾಮರು ಮತ್ತು ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಈ ಅದ್ದೂರಿ ಸಮಾರಂಭವನ್ನು ಸಾಕ್ಷೀಕರಿಸಿದರು.

ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪುರಸ್ಕøತರು:
ಅತ್ಯುತ್ತಮ ಚಿತ್ರ (ಡ್ರಾಮಾ)-1917. ಶ್ರೇಷ್ಠ ನಿರ್ದೇಶಕ-ಸ್ಯಾಮ್ ಮೆಂಡಿಸ್ (1917), ಶ್ರೇಷ್ಠ ನಟ-ಜೋವಾಕ್ವಿನ್ ಫಿನಿಕ್ಸ್ (ಜೋಕರ್), ಶ್ರೇಷ್ಠ ನಟಿ-ರೀನೀ ಝೆಲ್‍ವೆಗರ್ (ಜ್ಯೂಡಿ), ಉತ್ತಮ ಚಿತ್ರ (ಮ್ಯೂಸಿಕಲ್ ಅಥವಾ ಕಾಮಡಿ ವಿಭಾಗ)-ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್, ಶ್ರೇಷ್ಠ ನಟ (ಮ್ಯೂಸಿಕಲ್ ಅಥವಾ ಕಾಮಿಡಿ)-ಟರೋನ್ ಈಗರ್‍ಟನ್ (ರಾಕೆಟ್‍ಮ್ಯಾನ್), ಶ್ರೇಷ್ಠ ನಟಿ (ಮ್ಯೂಸಿಕಲ್ ಅಥವಾ ಕಾಮಿಡಿ)-ಅಕ್ವಾಫಿನಾ (ದಿ ಫೇರ್‍ವೆಲ್), ಶ್ರೇಷ್ಠ ಪೋಷಕ ನಟ-ಬ್ರಾಡ್ ಪಿಟ್ (ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್), ಶ್ರೇಷ್ಠ ಪೋಷಕ ನಟಿ-ಲಾರಾ ಡೆರ್ನ್ (ಮ್ಯಾರೇಜ್ ಸ್ಟೋರಿ), ಅತ್ಯುತ್ತಮ ವಿದೇಶಿ ಭಾಷಾ ಚಿತ್ರ0 ಪ್ಯಾರಾಸೈಟ್, ಅತ್ಯುತ್ತಮ ಅನಿಮೇಷನ್ ಚಿತ್ರ-ಮಿಸ್ಸಿಂಗ್ ಲಿಂಕ್, ಅತ್ಯುತ್ತಮ ಚಿತ್ರಕಥೆ-ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್ (ಕ್ವಿಂಟಿನ್ ಟರಾಂಟಿನೋ).

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ