120 ಭಾಷೆಗಳಲ್ಲಿ ಹಾಡುವ ಭಾರತೀಯ ಬಾಲಕಿಗೆ ಜಾಗತಿಕ ಪ್ರಶಸ್ತಿ

ದುಬೈ: 13 ವರ್ಷ ವಯಸ್ಸಿನ ಭಾರತೀಯ ಮೂಲದ ದುಬೈ ಬಾಲಕಿ ಪ್ರತಿಷ್ಠಿತ 100 ಗ್ಲೋಬಲ್‌ ಚೈಲ್ಡ್‌ ಪ್ರೋಡಿಜಿ (ಜಾಗತಿಕ 100 ಅದ್ಭುತ ಸಾಮರ್ಥ್ಯದ ಮಕ್ಕಳು) ಪ್ರಶಸ್ತಿಗೆ ಭಾಜನಳಾಗಿದ್ದಾಳೆ.

ಬಾಲಕಿ ಸುಚೇತಾ ಸತೀಶ್‌ 120 ಭಾಷೆಗಳಲ್ಲಿ ಹಾಡುವ ಸಾಮರ್ಥ್ಯ ಹೊಂದಿದ್ದಾಳೆ. ಅಲ್ಲದೆ, ದುಬೈನಲ್ಲಿನ ಭಾರತೀಯ ರಾಯಭಾರ ಕಚೇರಿಯ ಆಡಿಟೋರಿಯಂನಲ್ಲಿ ನಡೆದ ಸಂಗೀತ ಕಛೇರಿಯಲ್ಲಿ ಈಕೆ ಅತ್ಯಂತ ದೀರ್ಘ‌ಕಾಲ ಅಂದರೆ ಬರೋಬ್ಬರಿ 6.15 ಗಂಟೆಗಳ ಕಾಲ 102 ಭಾಷೆಗಳಲ್ಲಿ ಹಾಡಿದ್ದಾಳೆ.

ಈ ಸಾಧನೆಗಾಗಿ ಈಕೆಗೆ ಪ್ರಶಸ್ತಿ ದೊರೆತಿದೆ. ಸುಚೇತಾ ಇತ್ತೀಚೆಗಷ್ಟೇ “ಯಾ ಹಬಿಬ್‌’ ಎಂಬ ಸಂಗೀತ ಆಲ್ಬಂ ಅನ್ನು ಹೊರತಂದಿದ್ದಾರೆ. ಅದನ್ನು ಮಲಯಾಳಂನ ಖ್ಯಾತ ನಟ ಮಮ್ಮೂಟಿ ಬಿಡುಗಡೆ ಮಾಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ