ನವದೆಹಲಿ: ಟಾಟಾ ಸಂಸ್ಥೆಯ ಮುಖ್ಯಸ್ಥ ಸ್ಥಾನಕ್ಕೆ ಸೈರಸ್ ಮಿಸ್ತ್ರಿ ಅವರು ಮರು ನೇಮಕವಾಗಿ ಹದಿನೈದು ದಿನ ಕಳೆಯುವ ಮುನ್ನ ಟಾಟಾ ಸನ್ಸ್ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಟಾಟಾ ಸಂಸ್ಥೆಯ ಮುಖ್ಯಸ್ಥ ಸ್ಥಾನಕ್ಕೇರಿದ ಮೊದಲ ಟಾಟಾ ಕುಟುಂಬೇತರ ವ್ಯಕ್ತಿ ಸೈರಸ್ ಮಿಸ್ತ್ರಿ. ಅವರನ್ನು ಟಾಟಾ ಗ್ರೂಪ್ ಅಧ್ಯಕ್ಷರನ್ನಾಗಿ ಕೋರ್ಟ್ ಡಿಸೆಂಬರ್ 18ರಂದು ಮರುನೇಮಿಸಿತ್ತು. ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ನೇಮಕವಾಗಿದ್ದ ಎನ್.ಚಂದ್ರ ಅವರ ನೇಮಕಾತಿ ಅಕ್ರಮ ಎಂದು ಅಭಿಪ್ರಾಯಪಟ್ಟಿತ್ತು.
ಇದೇ ವರ್ಷದ ಜುಲೈನಲ್ಲಿ ಮೇಲ್ಮನವಿ ನ್ಯಾಯಾಧಿಕರಣ ತೀರ್ಪು ಕಾಯ್ದಿರಿಸಿತ್ತು. ಇದೇ ವಿಚಾರವಾಗಿ ದೀರ್ಘಕಾಲದ ವಿಚಾರಣೆ ನಡೆದು, ಕೋರ್ಟ್ ಆದೇಶ ಹೊರಡಿಸಿತ್ತು. ಇದಕ್ಕೂ ಮುನ್ನ ಮಿಸ್ತ್ರಿ ಅವರನ್ನು ಟಾಟಾ ಗ್ರೂಪ್ನಿಂದ ತೆಗೆದಬಳಿಕ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ (ಎನ್ಸಿಎಲ್ಟಿ) ಮುಂಬೈ ಪೀಠದಲ್ಲಿ ಸೈರಸ್ ಇನ್ವೆಸ್ಟ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಸ್ಟರ್ಲಿಂಗ್ ಇನ್ವೆಸ್ಟ್ಮೆಂಟ್ ಗ್ರೂಪ್ಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು.
ಆಬಳಿಕ ಸೈರಸ್ ಮಿಸ್ತ್ರಿ ಅವರನ್ನು ಎನ್ಸಿಎಲ್ಎಟಿ ಆದೇಶ ಪ್ರಶ್ನಿಸಿ, ಎನ್ಸಿಎಲ್ಎಟಿಗೆ ವೈಯಕ್ತಿಕವಾಗಿ ಮನವಿ ಮಾಡಿದ್ದರು. ಶಾಪೂರ್ಜಿ ಪಲ್ಲೋಂಜಿ ಕುಟುಂಬದ ಸೈರಸ್ ಮಿಸ್ತ್ರಿ ಟಾಟಾ ಸನ್ಸ್ನಲ್ಲಿ ಸ್ವಲ್ಪಪ್ರಮಾಣದ ಷೇರುಗಳನ್ನು ಹೊಂದಿದ್ದಾರೆ. 2016ರ ಅಕ್ಟೋಬರ್ನಲ್ಲಿ ಇವರನ್ನು ಕಂಪನಿ ಅಧ್ಯಕ್ಷ ಸ್ಥಾನದಿಂದ ತೆಗೆಯಲಾಗಿತ್ತು.