ಭಾರತೀಯ ರಾಯಭಾರಿ ರೇಣು ಪಾಲ್ ಅವರಿಂದ ಸರ್ಕಾರದ ಹಣ ದುರುಪಯೋಗ

ನವದೆಹಲಿ, ಡಿ.30- ಆಸ್ಟ್ರೇಲಿಯಾದ ಭಾರತೀಯ ರಾಯಭಾರಿ ರೇಣು ಪಾಲ್ ಅವರು ತಿಂಗಳಿಗೆ 15 ಲಕ್ಷ ರೂ.ಗೆ ಅಪಾಟ್ರ್ಮೆಂಟ್ ಬಾಡಿಗೆಗೆ ಪಡೆದಿದ್ದು, ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ವಿದೇಶಾಂಗ ಸಚಿವಾಲಯ ಅವರನ್ನು ವಾಪಸ್ ಕರೆಸಿಕೊಂಡಿದೆ.

ಕೇಂದ್ರ ವಿಜಿಲೆನ್ಸ್ ಆಯೋಗ (ಸಿವಿಸಿ) ಆದೇಶಿಸಿದ ಮತ್ತು ವಿದೇಶಾಂಗ ಸಚಿವಾಲಯ ನಡೆಸಿದ ತನಿಖೆಯ ಪ್ರಕಾರ, ಅವರು ಸಚಿವಾಲಯದ ಅನುಮತಿಯಿಲ್ಲದೆ ಸರ್ಕಾರಿ ನಿವಾಸದ ಮೇಲೆ ಕೋಟ್ಯಂತರ ರೂಪಾಯಿಗಳಿಗೆ ಭಾರೀ ಖರ್ಚು ಮಾಡಿದ್ದಾರೆ.

ರಾಜತಾಂತ್ರಿಕರು ಸರ್ಕಾರವು ನೀಡಿದ ವ್ಯಾಟ್ ಮರುಪಾವತಿ ಮತ್ತು ವಿವಿಧ ಅನುಮತಿಗಳಲ್ಲಿ ಸತ್ಯವನ್ನು ತಪ್ಪಾಗಿ ನಿರೂಪಿಸುತ್ತಿದ್ದಾರೆ ಎಂದು ಆರೋಪಗಳು ಕೇಳಿಬಂದಿದ್ದವು.

ಈ ಹಿನ್ನೆಲೆಯಲ್ಲಿ ಸಚಿವಾಲಯದ ಮುಖ್ಯ ವಿಜಿಲೆನ್ಸ್ ಅಧಿಕಾರಿ ನೇತೃತ್ವದ ತಂಡವು ಸೆಪ್ಟೆಂಬರ್‍ನಲ್ಲಿ ವಿಯೆನ್ನಾಕ್ಕೆ ಭೇಟಿ ನೀಡಿ ಈ ಸಂಬಂಧ ತನಿಖೆ ನಡೆಸಿದ್ದು, ಸಿವಿಸಿ ತನ್ನ ವರದಿಯಲ್ಲಿ ಹಣಕಾಸಿನ ಅಕ್ರಮ, ಹಣ ದುರುಪಯೋಗ ಮತ್ತು ನಡವಳಿಕೆಯ ನಿಯಮಗಳ ಉಲ್ಲಂಘನೆಯಾಗಿರುವುದನ್ನು ದೃಢಪಡಿಸಿದೆ.

ಸಚಿವಾಲಯವು ಡಿ.9ರಂದು ಪಾಲ್ ಅವರನ್ನು ಪ್ರಧಾನ ಕಚೇರಿಗೆ ವರ್ಗಾಯಿಸಿತು ಮತ್ತು ರಾಯಭಾರಿಯ ಯಾವುದೇ ಆಡಳಿತಾತ್ಮಕ ಅಥವಾ ಆರ್ಥಿಕ ಅಧಿಕಾರವನ್ನು ಚಲಾಯಿಸುವುದನ್ನು ತಡೆಯಿತು. ಪಾಲ್ ಭಾನುವಾರ ಸಂಜೆ ವಿಯೆನ್ನಾದಿಂದ ಭಾರತಕ್ಕೆ ಮರಳುತ್ತಿದ್ದಾರೆ.

1988ರ ಬ್ಯಾಚ್‍ನ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿಯಾಗಿದ್ದ ರೇಣು ಪಾಲ್ ಮುಂದಿನ ತಿಂಗಳು ಆಸ್ಟ್ರಿಯಾದಲ್ಲಿ ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸಬೇಕಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ