ಮೈತ್ರಿ ಕೂಟ ಸರ್ಕಾರದ ಸಂಪುಟ ವಿಸ್ತರಣೆ

ಮುಂಬೈ, ಡಿ.30- ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ ಅಘಾಡಿ (ಎಂವಿಎ) ಮೈತ್ರಿ ಕೂಟ ಸರ್ಕಾರದ ಸಂಪುಟ ಇಂದು ವಿಸ್ತರಣೆಯಾಗಿದೆ.

ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್ ಸೇರಿದಂತೆ ಕಾಂಗ್ರೆಸ್‍ನ 10 ಶಾಸಕರನ್ನೊಳಗೊಂಡ 36 ಶಾಸಕರಿಗೆ ಸಚಿವ ಹುದ್ದೆ ಲಭಿಸಿದೆ.

ವಿಧಾನಭವನದಲ್ಲಿ ಇಂದು ಮಧ್ಯಾಹ್ನ 1 ಗಂಟೆಗೆ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಭಗತ್‍ಸಿಂಗ್ ಕೋಶ್ಯಾರಿ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.

ಕಾಂಗ್ರೆಸ್‍ನ ಅಶೋಕ್‍ಚೌಹಾಣ್, ಕೆ.ಸಿ.ಪಡವಿ, ವಿಜಯ್ ವಡಟ್ಟಿವಾರ್, ಅಮಿದ್ ದೇಶ್‍ಮುಖ್, ಸುನೀಲ್ ಖದರ್, ಯಶೋಮತಿ ಠಾಕೂರ್, ವರ್ಷಾಗಾಯಕ್‍ವಾಡ್ ಮತ್ತು ಅಸ್ಲಂ ಶೇಖ್ ಸಂಪುಟದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕಾಂಗ್ರೆಸ್‍ನ ಸಟೇಜ್‍ಪಾಟಿಲ್ ಮತ್ತು ವಿಶ್ವಜಿತ್ ಖದಮ್, ಸಹಾಯಕ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ನ.28ರಂದು ಮುಖ್ಯಮಂತ್ರಿ ಠಾಕ್ರೆಯವರೊಂದಿಗೆ ಆರು ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದರು. ಕಾಂಗ್ರೆಸ್ ಬಾಳಾ ಸಾಹೇಬ್ ತೋರಟ್ ಮತ್ತು ನಿತಿನ್ ರಾವತ್ ಸಚಿವರಾಗಿದ್ದಾರೆ. ಅಲ್ಲದೆ, ಶಿವಸೇನೆಯ ಏಕನಾಥ್ ಶಿಂಧೆ ಮತ್ತು ಸುಭಾಷ್ ದೇಸಾಯ್ ಮಂತ್ರಿಯಾಗಿ ರಾಜ್ಯಪಾಲರಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು.

ಎನ್‍ಸಿಪಿಯಿಂದ ಜಯಂತ್ ಪಾಟೀಲ್ ಮತ್ತು ಚಗನ್ ಭುಜಬಲ್ ಮಂತ್ರಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ