ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆಗೆ ಶರಣಾಗಿದ್ದ ಮನೆ ಈಗ ಡಯಾಗ್ನೋಸ್ಟಿಕ್ ಕೇಂದ್ರ

ನವದೆಹಲಿ: ಕಳೆದ ವರ್ಷ ಜುಲೈ ತಿಂಗಳಲ್ಲಿ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆಗೆ ಶರಣಾಗಿದ್ದ ಮನೆ ಇದೀಗ ಡಯಾಗ್ನೋಸ್ಟಿಕ್ (ರೋಗ ಪತ್ತೆ ಕೇಂದ್ರ) ಸೆಂಟರ್ ಆಗಿ ಪರಿವರ್ತನೆಗೊಂಡಿದೆ. ನಾನು ಮೂಢನಂಬಿಕೆಯನ್ನು ನಂಬಲ್ಲ ಎಂದು ಡಯಾಗ್ನೋಸ್ಟಿಕ್ ಸೆಂಟರ್ ಮಾಲೀಕ ತಿಳಿಸಿರುವುದಾಗಿ ವರದಿ ಹೇಳಿದೆ.

ನನಗೆ ಅಂಧಶ್ರದ್ಧೆ ಮೇಲೆ ನಂಬಿಕೆ ಇಲ್ಲ, ಒಂದು ವೇಳೆ ಇಂತಹ ವಿಷಯಗಳ ಬಗ್ಗೆ ನಂಬಿದ್ದರೆ ನಾನು ಇಲ್ಲಿಗೆ ಬರುತ್ತಿರಲಿಲ್ಲ. ನನ್ನ ರೋಗಿಗಳು ಕೂಡಾ ಪರೀಕ್ಷೆ ಮಾಡಿಸಿಕೊಳ್ಳಲು ಇಲ್ಲಿಗೆ ಬರಲು ಯಾವುದೇ ತೊಂದರೆ ಇಲ್ಲ ಎಂದು ಡಾ.ಮೋಹನ್ ಸಿಂಗ್ ತಿಳಿಸಿದ್ದಾರೆ.

ಈ ಮನೆಯಲ್ಲಿ ನನಗೆ ಯಾವುದೇ ತೊಂದರೆ ಇಲ್ಲ. ಮನೆ ರಸ್ತೆ ಸಮೀಪ ಇರುವುದರಿಂದ ರೋಗಿಗಳಿಗೆ ಹತ್ತಿರವಾಗಲಿದೆ. ನಾನು ಕೂಡಾ ಮೂಢನಂಬಿಕೆಯ ವ್ಯಕ್ತಿಯಲ್ಲ ಎಂದು ಹೇಳಿರುವುದಾಗಿ ವರದಿ ವಿವರಿಸಿದೆ. ಏತನ್ಮಧ್ಯೆ ಹಿಂದೂ ಪುರೋಹಿತರು ಆಗಮಿಸಿ ಪೂಜೆ, ಪುನಸ್ಕಾರ ನಡೆಸಿ ದುಷ್ಟ ಶಕ್ತಿಗಳ ನಿವಾರಣೆಗೆ ಹೋಮ ನಡೆಸಿರುವುದಾಗಿ ಹೇಳಿದರು.

ಯಾವುದೇ ಹೊಸ ಕೆಲಸ ಆರಂಭಿಸುವಾಗ ಗೌರಿ-ಗಣೇಶ ಪೂಜೆ ನಡೆಸುವುದು ಸಂಪ್ರದಾಯ. ಹೀಗಾಗಿ ಆಸ್ಪತ್ರೆ ಆರಂಭಕ್ಕೂ ಮುನ್ನ ಹೋಮ, ಹವನ ನಡೆಸಲಾಗಿದೆ. ಆದರೆ ಭೂತ, ಪಿಶಾಚಿಗಳ ಬಗ್ಗೆ ನಂಬಿಕೆ ಇಲ್ಲ ಎಂದು ಸಿಂಗ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ