ಆಫ್ಘಾನಿಸ್ತಾನದಲ್ಲಿ ಮುಂದುವರೆದ ತಾಲಿಬಾನ್ ಉಗ್ರರು ನಡೆಸುತ್ತಿರುವ ಕ್ರೌರ್ಯ

ಲಷ್ಕರ್‍ಗಾಹ್, ಡಿ.29- ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ಸೇನಾ ಪಡೆಗಳನ್ನು ಗುಹೆಯಲ್ಲಿಟ್ಟುಕೊಂಡು ತಾಲಿಬಾನ್ ಉಗ್ರರು ನಡೆಸುತ್ತಿರುವ ಕ್ರೌರ್ಯ ಮುಂದುವರೆದಿದೆ.

ದಕ್ಷಿಣ ಆಫ್ಘಾನಿಸ್ತಾನದ ದಕ್ಷಿಣ ಹೆಲ್ಮಾಂಡ್ ಪ್ರಾಂತ್ಯದ ಸಾಂಗಿನ್ ಜಿಲ್ಲೆಯ ಸೇನಾ ಚೆಕ್ ಪಾಯಿಂಟ್ ಬಳಿ ನಿನ್ನೆ ಸ್ಫೋಟಗೊಂಡು ಹತ್ತು ಸೈನಿಕರು ಹುತಾತ್ಮರಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಸೈನ್ಯ ಪ್ರಕಟಣೆಯಲ್ಲಿ ತಿಳಿಸಿದೆ.

ಚೆಕ್ಪಾಯಿಂಟ್ ಬಳಿ ಭಯೋತ್ಪಾದಕರು ನಡೆಸಿದ ಬಾಂಬ್ ದಾಳಿಗೆ ಸೌನಿಕರು ಹುತಾತ್ಮರಾಗಿದ್ದಾರೆ. ಇತ್ತೀಚೆಗೆ ನಡೆದ ಬಾಂಬ್ ಸೋಟದಲ್ಲಿ 26 ಸೈನಿಕರು ಸಾವನ್ನಪ್ಪಿದ್ದು, ಸ್ಪೋಟದ ಹೊಣೆಯನ್ನು ತಾಲಿಬಾನ್ ಸಂಘಟನೆಯು ಹೊತ್ತಿದೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.

ಹೆಲ್ಮಂಡ್ ಪ್ರಾಂತ್ಯವು, ಕಾಶ್ಬುಲ್‍ನಿಂದ ದಕ್ಷಿಣಕ್ಕೆ 555 ಕಿ.ಮೀ ದೂರದಲ್ಲಿರುವ ಲಷ್ಕರ್ ಗಾಹ್ ಅನ್ನು ರಾಜಧಾನಿಯಾಗಿ ಹೊಂದಿದ್ದು, ಸಂಘರ್ಷ ಪೀಡಿತ ಆಫ್ಘಾನಿಸ್ತಾನವನ್ನು ತಾಲಿಬಾನ್ ಕೇಂದ್ರವಾಗಿ ಪರಿಗಣಿಸಲಾಗಿದೆ.

ಮೊನ್ನೆಯಷ್ಟೇ ಉಗ್ರರ ವಿರುದ್ಧ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಆಫ್ಘನ್ ಸೇನೆ 120ಕ್ಕೂ ಹೆಚ್ಚು ಬಂಡುಕೋರರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಯೋಧರ ನರಮೇಧ ನಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ