ಮೃಗಾಲಯಕ್ಕೆ ಅಸ್ಸಾಂನಿಂದ ನೂತನ ಅತಿಥಿಗಳ ಆಗಮನ

ಮೈಸೂರು, ಡಿ.16- ಶ್ರೀ ಜಯ ಚಾಮರಾಜೇಂದ್ರ ಮೃಗಾಲಯಕ್ಕೆ ಅಸ್ಸಾಂನಿಂದ ನೂತನ ಅತಿಥಿಗಳ ಆಗಮನವಾಗಿವೆ.

ಗೌಹಾತಿಯ ಅಸ್ಸಾಂ ಮೃಗಾಲಯದಿಂದ ಒಂದು ಹೆಣ್ಣು ಘೇಂಡಾಮೃಗ, ಒಂದು ಜೊತೆ ಉಲಾಕ್ ಗಿಬ್ಬನ್ ಹಾಗೂ ಒಂದು ಕಪ್ಪು ಚಿರತೆಯ ಆಗಮನವಾಗಿದೆ.

ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಈ ಪ್ರಾಣಿಗಳನ್ನು ಮೈಸೂರು ಮೃಗಾಲಯ್ಕಕೆ ತರಲಾಗಿದ್ದು, ಇದಕ್ಕೆ ಪ್ರತಿಯಾಗಿ ಮೈಸೂರು ಮೃಗಾಲಯದಿಂದ ನ.28ರಂದು 11.5 ಅಡಿ ಎತ್ತರದ ಗಂಡು ಜಿರಾಫೆಯನ್ನು ರಸ್ತೆ ಮಾರ್ಗವಾಗಿ ಅಸ್ಸಾಂ ಮೃಗಾಲಯಕ್ಕೆ ಸಾಗಾಣೆ ಮಾಡಲಾಗಿದೆ.

ಜಿರಾಫೆಯನ್ನು ಇದೇ ಪ್ರಥಮ ಬಾರಿಗೆ ರಸ್ತೆ ಮಾರ್ಗವಾಗಿ 3.200 ಕೆಎಂ ದೂರದವರೆಗೂ ಸಾಗಿಸಿರುವುದಾಗಿ ಮೃಗಾಲಯದ ಸಹಾಯಕ ನಿರ್ದೇಶಕ ಡಾ.ಕೆ.ಆರ್.ರಮೇಶ್, ಪಶು ವೈದ್ಯಾಧಿಕಾರಿ ಡಾ.ಕೆ.ವಿ.ಮದನ್, ವಲಯ ಅರಣ್ಯಾಧಿಕಾರಿ ಎ.ವಿ.ಸತೀಶ್, ಉಪವಲಯ ಅರಣ್ಯಾಧಿಕಾರಿ ಪಿ.ಒ.ಮಂಜುನಾಥ್, ಪ್ರಾಣಿ ವಿಭಾಗದ ಮೇಲ್ವಿಚಾರಕರಾದ ಉದಯ್‍ಕುಮಾರ್, ಪ್ರಾಣಿ ಪಾಲಕರಾದ ಮಧುಸೂದನ್, ವಿನೋದ್‍ಕುಮಾರ್. ಸ್ವಾಮಿ ಹಾಗೂ ಸಿ.ವಿ.ಸ್ವಾಮಿ ಯಶಸ್ವಿಯಾಗಿದ್ದಾರೆ.

ಅಸ್ಸಾಂನಿಂದ ಬಂದಿರುವ ಪ್ರಾಣಿಗಳನ್ನು ಸಾರ್ವಜನಿಕರು ವೀಕ್ಷಿಸಬಹುದು ಎಂದು ಮೃಗಾಯದ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ