ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶಿಸಿರುವ ಅಪಾರ ನಿರೀಕ್ಷೆಯ ಅದ್ದೂರಿ ಚಿತ್ರ “ಇಂಡಿಯಾ ವರ್ಸಸ್ ಇಂಗ್ಲೆಂಡ್” ಚಿತ್ರದ ಗೀತೆಯ ಬಿಡುಗಡೆ

ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶಿಸಿರುವ ಅಪಾರ ನಿರೀಕ್ಷೆಯ ಅದ್ದೂರಿ ಚಿತ್ರ “ಇಂಡಿಯಾ ವರ್ಸಸ್ ಇಂಗ್ಲೆಂಡ್” ಚಿತ್ರದ ಮೊದಲ ಗೀತೆಯನ್ನು ಪವರ್‍ಸ್ಟಾರ್ ಪುನೀತ್ ರಾಜಕುಮಾರ್ ಅವರು ಇತ್ತೀಚಿಗೆ ಬಿಡುಗಡೆ ಮಾಡಿದರು. “ಲವ್ವೇ ಇಲ್ಲದೆ ಗೆಳೆಯ ಲೈಫಲ್ಲೇನಿದೆ? ಹೊಂದಿ ಬಾಳದೆ ಬೇರೆ ದಾರಿ ಎಲ್ಲಿದೆ?” ಎಂದು ಆರಂಭವಾಗುವ ಈ ಗೀತೆ ವಸಿಷ್ಠ ಸಿಂಹನನ್ನು ನಾಯಕನನ್ನಾಗಿ ಪರಿಚಯಿಸುತ್ತದೆ. ನಾಗತಿಹಳ್ಳಿ ಚಂದ್ರಶೇಖರ ಅವರು ಸಾಹಿತ್ಯ ರಚಿಸಿರುವ ಈ ಗೀತೆಯನ್ನು ಸಂಜಿತ್ ಹೆಗ್ಡೆ ಅವರು ಹಾಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಈ ಹಾಡನ್ನು ಸಂಪೂರ್ಣವಾಗಿ ಇಂಗ್ಲೆಂಡ್‍ನಲ್ಲಿ ಚಿತ್ರೀಕರಿಸಲಾಗಿದೆ. ವಿಲ್ ಪ್ರೈಸ್ ಇದರ ಛಾಯಾಗ್ರಹಕರು. ಮೋಹನ್ ಅವರಿಂದ ನೃತ್ಯ ನಿರ್ದೇಶನವಿದೆ. ವೈ. ಎನ್. ಶಂಕರೇಗೌಡರು ತಮ್ಮ ಮಿತ್ರರೊಂದಿಗೆ ಸೇರಿ ನಾಗತಿಹಳ್ಳಿ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಿಸಿದ್ದಾರೆ. ಗೀತೆಯನ್ನು ಬಿಡುಗಡೆ ಮಾಡಿದ ಅಪ್ಪು, “ಅರ್ಜುನ್ ಜನ್ಯ ಉತ್ತಮ ಸಂಯೋಜನೆ ಮಾಡಿದ್ದಾರೆ. ನಾಗತಿಹಳ್ಳಿ ಸರ್ ಅವರ ಕಾಂಬಿನೇಶನ್‍ನಲ್ಲಿ ಉತ್ತಮವಾಗಿ ಮೂಡಿ ಬಂದಿದೆ. ಖಳನಾಯಕನಾಗಿದ್ದ ವಸಿಷ್ಠ ಸಿಂಹ ನಾಯಕನಾಗಿ ಡ್ಯುಯೆಟ್ ಹಾಡ್ತಿರೋದನ್ನ ನೋಡುವುದಕ್ಕೆ ಇಷ್ಟವಾಗುತ್ತಿದೆ” ಎಂದು ಶುಭ ಕೋರಿದರು.

ಈ ಹಾಡು ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ