ಪ್ರಧಾನಿ ಜೊತೆ ‘ಪರೀಕ್ಷಾ ಪೇ ಚರ್ಚಾ-2020’ ಕ್ಕೆ ರಿಜಿಸ್ಟ್ರೇಷನ್ ಆರಂಭ

ಹೊಸದಿಲ್ಲಿ: ವಿದ್ಯಾರ್ಥಿಗಳು, ಪರೀಕ್ಷೆ ಬಗ್ಗೆ ತಮಗಿರುವ ಭಯ ಮತ್ತು ಒತ್ತಡವನ್ನು ನಿವಾರಿಸಿಕೊಳ್ಳಲು, ಅದನ್ನು ಸಮರ್ಥವಾಗಿ ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಜತೆ ನಡೆಸುವ ‘ಪರೀಕ್ಷಾ ಪೇ ಚರ್ಚಾ – 2020’ ರ ಸಂವಾದಕ್ಕೆ ರಿಜಿಸ್ಟ್ರೇಷನ್‌ ಆರಂಭವಾಗಿದೆ. ಇದಕ್ಕೆ ಎಲ್ಲಾ ಸಕಲ ಸಿದ್ಧತೆಗಳು ನಡೆದಿದ್ದು, ಈ ಬಗ್ಗೆ ಮೋದಿ ಗುರುವಾರ ಟ್ವೀಟ್ ಮೂಲಕ ತಿಳಿಸಿದ್ದಾರೆ.

‘ಪರೀಕ್ಷಾ ಪೇ ಚರ್ಚಾ-2020’ ರಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲದೇ ಶಿಕ್ಷಕರು, ಪಾಲಕರು ಸಹ ಪಾಲ್ಗೊಳ್ಳಬಹುದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಯೊಂದಿಗಿನ ಮೂರನೇ ಆವೃತ್ತಿಯ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮ ಇದಾಗಿದೆ. ‘ಪರೀಕ್ಷಾ ಪೇ ಚರ್ಚಾ-2020’ ಕ್ಕೆ ಆನ್‌ಲೈನ್‌ ರಿಜಿಸ್ಟ್ರೇಷನ್‌ ಆರಂಭವಾಗಿದ್ದು, 9 ರಿಂದ 12 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸಂವಾದದಲ್ಲಿ ಪಾಲ್ಗೊಳ್ಳಬಹುದು.

5 ವಿಷಯಗಳ ಬಗ್ಗೆ ಸಂವಾದ
ಆಸಕ್ತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರು ಸೂಚಿತ ಐದು ವಿಷಯಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಮೂಲಕ ಮೋದಿ ಜೊತೆ ಸಂವಾದ ನಡೆಸಬಹುದು.

ಸಂವಾದ ನಡೆಸಲಾಗುವ ಐದು ವಿಷಯಗಳು
– ಕೃತಜ್ಞತೆ ಎಂಬುದು ಅದ್ಭುತ
– ನಿಮ್ಮ ಭವಿಷ್ಯ ನಿಮ್ಮ ಆಕಾಂಕ್ಷೆಗಳ ಮೇಲೆ ಅವಲಂಭಿತವಾಗಿರುತ್ತದೆ.
– ಪರೀಕ್ಷೆಗಳನ್ನು ಪರೀಕ್ಷಿಸಲಾಗುತ್ತದೆ.
– ನಮ್ಮ ಕರ್ತವ್ಯಗಳು, ನೀವು ತೆಗೆದುಕೊಳ್ಳುವಿಕೆ
– ಸಮತೋಲನವು ಪ್ರಯೋಜನಕಾರಿ
ಈ ವಿಷಯಗಳ ಕುರಿತು ಏನೆಲ್ಲಾ ಮಾಹಿತಿಗಳನ್ನು ಹಂಚಿಕೊಳ್ಳಬಹುದು ಎಂಬುದನ್ನು ತಿಳಿಯಲು ವೆಬ್‌ಸೈಟ್‌ ವಿಳಾಸ www.innovate.mygov.in/ppc-2020 ಕ್ಕೆ ಭೇಟಿ ನೀಡಿ ಸಂಪೂರ್ಣ ವಿವರ ತಿಳಿಯಬಹುದು.

ರಿಜಿಸ್ಟ್ರೇಷನ್ಹೇಗೆ?
ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರು ತಮ್ಮ ಅಭಿಪ್ರಾಯ, ಸಲಹೆ, ಸೂಚನೆಗಳಿಗದ್ದಲ್ಲಿ 1,500 ಪದಗಳಿಗೆ ಮೀರದಂತೆ, ಹಾಗೂ ಪ್ರಶ್ನೆಗಳಿದ್ದಲ್ಲಿ 500 ಪದಗಳಿಗೆ ಮೀರದಂತೆ ಬರೆದು ಕಳುಹಿಸಬೇಕು.

ಆಸಕ್ತರು www.innovate.mygov.in/ppc-2020 ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವಿದ್ಯಾರ್ಥಿಗಳಾಗಿದ್ದಲ್ಲಿ ‘Participate as Student’, ಶಿಕ್ಷಕರಾಗಿದ್ದಲ್ಲಿ ‘Participate through Teacher’ ಆಯ್ಕೆಗಳನ್ನು ಕ್ಲಿಕ್ ಮಾಡಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ರಿಜಿಸ್ಟ್ರೇಷನ್ ಮಾಡಬಹುದು.

ಸಂವಾದಕ್ಕೆ ಆಯ್ಕೆಯಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಚರ್ಚೆ ನಡೆಯುವ ಸ್ಥಳ ಹಾಗೂ ದಿನಾಂಕದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುತ್ತದೆ. ‘ಪರೀಕ್ಷಾ ಪೇ ಚರ್ಚಾ-2020’ ಸಂವಾದ ಕಾರ್ಯಕ್ರಮವನ್ನು 2020 ರ ಜನವರಿ ತಿಂಗಳಲ್ಲಿ ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ