ಉಪಚುನಾವಣೆ ಮತದಾನ: ಬೆಳಿಗ್ಗೆ 9 ಗಂಟೆ ವರೆಗಿನ ಮತದಾನದ ವಿವರ ಹೀಗಿದೆ  

ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಪ್ರಗತಿಯಲ್ಲಿದ್ದು, ಮತದಾರರು ನೀರಸ ಪ್ರತಿಕ್ರಿಯೆ ತೋರಿರುವಂತಿದೆ.

ಬೆಳಿಗ್ಗೆ 7 ಕ್ಕೆ ಪ್ರಾರಂಭವಾಗಿರುವ ಮತದಾನ 2 ಗಂಟೆಗಳು ಕಳೆದರೂ ಒಟ್ಟಾರೆ ಶೇ.06 ರಷ್ಟು ಮತದಾನ ನಡೆದಿದೆ.  ಬೆಳಿಗ್ಗೆ 9 ಗಂಟೆಯವರೆಗೆ ಕ್ಷೇತ್ರವಾರು ಮತದಾನದ ವಿವರ ಹೀಗಿದೆ 

ಅಥಣಿ- ಶೇ.8.33
ಕಾಗವಾಡ- ಶೇ.6.94
ಗೋಕಾಕ್- ಶೇ.6.11
ಯೆಲ್ಲಾಪುರ- ಶೇ.7.54
ಹಿರೇಕೆರೂರು- ಶೇ.5.59
ರಾಣೇಬೆನ್ನೂರು- ಶೇ.6.22
ವಿಜಯನಗರ- ಶೇ.6.50
ಚಿಕ್ಕಬಳ್ಳಾಪುರ- ಶೇ. 6.91
ಕೆ.ಆರ್ ಪುರ- ಶೇ.6.15
ಯಶವಂತಪುರ- ಶೇ.4.19
ಮಹಾಲಕ್ಷ್ಮಿ ಲೇಔಟ್- ಶೇ.8.21
ಶಿವಾಜಿನಗರ- ಶೇ.03.04
ಹೊಸಕೋಟೆ- ಶೇ.9.01
ಕೆ.ಆರ್ ಪೇಟೆ- ಶೇ.6.20
ಹುಣಸೂರು- ಶೇ.6.18

ಈ ಪೈಕಿ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಈ ವರೆಗೆ ಗರಿಷ್ಠ ಪ್ರಮಾಣದ ಮತದಾನ ನಡೆದಿದ್ದು, ಶಿವಾಜಿನಗರದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ