ಬೆಳಗಾವಿ: ಚುನಾವಣೆ ಕರ್ತವ್ಯ ಲೋಪವೆಸಗಿದ ಆರೋಪದ ಹಿನ್ನೆಲೆಯಲ್ಲಿ ಗೋಕಾಕ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅದೇಶ ಹೊರಡಿಸಿದ್ದಾರೆ.
ಸವದತ್ತಿ ರಾಯಣ್ಣ ನಗರದ ತೆಂಗಿನಹಾಳದ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಕಾಶ ವೀರಭದ್ರಪ್ಪ ನಾಶಿಪುಡಿ ಅಮಾನತುಗೊಂಡವರು.
ಬುಧವಾರ ಮಾಸ್ಟರಿಂಗ್ ಕೇಂದ್ರಕ್ಕೆ ಪ್ರಕಾಶ ಅವರು ಮದ್ಯಪಾನ ಮಾಡಿ ಬಂದಿದ್ದರು. ಅಲ್ಲದೆ, ವೈದ್ಯಕೀಯ ತಪಾಸಣೆ ವೇಳೆ ಸ್ಪಂದಿಸದೇ ಓಡಿಹೋಗಿದ್ದರು. ಇವೆಲ್ಲ ಕಾರಣಗಳಿಗಾಗಿ ಅವರ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.






