
ನವದೆಹಲಿ: ಕಾಶ್ಮೀರದಲ್ಲಿ ಸಹಜ ಸ್ಥಿತಿ ನಿರ್ಮಾಣವಾಗಿದ್ದರು. ಗಡಿಯಲ್ಲಿನ ಬೆದರಿಕೆಗಳಿಂದ ಇನ್ನು ಆತಂಕದ ವಾತಾವರಣ ನಿರ್ಮಾಣವಾಗಿದೆ. ಆಡಳಿತವನ್ನು ಪುನರ್ಸ್ಥಾಪಿಸಲು ಅಲ್ಲಿ ಇನ್ನು ಸ್ವಲ್ಪ ಸಮಯ ಬೇಕಾಗಿಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಚಳಿಗಾಲದ ಮೊದಲೆರಡು ದಿನದ ಅಧಿವೇಶನದಲ್ಲಿ ಸೋನಿಯಾ ಗಾಂಧಿ ಕುಟುಂಬಕ್ಕೆ ವಿಶೇಷ ಭದ್ರತಾ ಪಡೆ ಹಿಂಪಡೆದ ಹಾಗೂ ಜಮ್ಮು ಕಾಶ್ಮೀರ ವಿಷಯಗಳು ಸದನದಲ್ಲಿ ಗದ್ದಲ ಎಬ್ಬಿಸಿದ ಹಿನ್ನೆಲೆ ಈ ಕುರಿತು ಅವರು ರಾಜ್ಯಸಭೆಯಲ್ಲಿ ಉತ್ತರಿಸಿದರು.
ಕಣಿವೆ ರಾಜ್ಯದಲ್ಲಿ ಇನ್ನು ಶಾಲೆಗಳು ಆರಂಭವಾಗಿರದ ಕುರಿತು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಪ್ರಶ್ನೆಗೆ ಉತ್ತರಿಸಿದ ಅವರು, ಶಾಲಾ-ಕಾಲೇಜುಗಳು ಪ್ರವೇಶ ಮುಕ್ತವಾಗಿದೆ, ಆದರೆ, ಅಲ್ಲಿ ಹಾಜರಾತಿ ನಿರ್ಲಕ್ಷ್ಯ ಕಂಡು ಬಂದಿದೆ. ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ಸುರಕ್ಷಿತವಾಗಿ ಪ್ರಯಾಣಿಸುವ ಕುರಿತು ಯಾವುದೇ ಭರವಸೆ ನೀಡಲು ಸಾಧ್ಯವಾಗಿಲ್ಲ.
ಇಂದಿನ ಜಗತ್ತಿನಲ್ಲಿ ಅಂತರ್ಜಾಲದ ಸಂಪರ್ಕದ ಅವಶ್ಯಕತೆ ಹೆಚ್ಚಿದೆ. ಆದರೆ ರಾಷ್ಟ್ರೀಯ ಭದ್ರಾತಾ ದೃಷ್ಟಿಯಿಂದ ಹಾಗೂ ಜಮ್ಮು ಮತ್ತು ಕಾಶ್ಮೀರದ ಜನರ ಸುರಕ್ಷತೆಯಿಂದ ಉಗ್ರರ ವಿರುದ್ಧ ನಾವು ಹೋರಾಡಬೇಕಿದೆ. ಈ ಹಿನ್ನೆಲೆ ಇಂಟರ್ನೆಟ್ ಸೇವೆಯನ್ನು ನೀಡಲಾಗಿಲ್ಲ ಎಂದರು.
ಇದೇ ವೇಳೆ ಆಗಸ್ಟ್ 5ರಿಂದ ಇಲ್ಲಿಯವರೆಗೂ ಯಾವುದೇ ನಾಗರಿಕರ ಹತ್ಯೆಯಾಗಿಲ್ಲ ಎಂದು ಸ್ಟಷ್ಟಪಡಿಸಿದರು.
ಇದಾದ ಬಳಿಕ ಎನ್ಆರ್ಸಿ ಕುರಿತು ಮಾತು ಹೊರಳಿಸಿದ ಶಾ, ಇದನ್ನು ಸುಪ್ರೀಂಕೋರ್ಟ್ ನಿರ್ವಹಿಸುತ್ತಿದೆ, ಯಾವುದೇ ಧರ್ಮವನ್ನು ಗುರಿಯಾಗಿಸಿಕೊಂಡಿಲ್ಲ ಅಥವಾ ಈ ಕಾರ್ಯದ ವೇಳೆ ಅವುಗಳನ್ನು ಮರೆಮಾಚುವ ಯತ್ನ ನಡೆಸಿಲ್ಲ. ಯಾರ ಹೆಸರು ಎನ್ಆರ್ಸಿಯಲ್ಲಿರುವುದಿಲ್ಲವೋ ಅವರು ಟ್ರಿಬ್ಯೂನಲ್ ಮೊರೆ ಹೋಗಬಹುದು. ಕಾನೂನು ಸಲಹೆ ಕುರಿತು ಸಲಹೆ ಪಡೆಯಲು ಸಾಧ್ಯವಾಗದಿರುವವರಿಗೆ ಅಸ್ಸಾಂ ಆರ್ಥಿಕ ಸಹಾಯ ನೀಡಲಿದೆ ಎಂದು ಭರವಸೆ ನೀಡಿದರು.