ಹೊಸಕೋಟೆ: ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಎಂಟಿಬಿ ನಾಗರಾಜ್ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸಕೋಟೆಯಲ್ಲಿ ಬೃಹತ್ ಮೆರವಣಿಗೆ ನಡೆಯುತ್ತಿದ್ದು, ಎಂಟಿಬಿ ಕಚೇರಿಯಲ್ಲಿ ಕಾರ್ಯಕರ್ತರ ದಂಡು ಜಮಾಯಿಸಿದೆ.
ಹೊಸಕೋಟೆಯಿಂದ ಎರಡನೇ ಬಾರಿಗೆ ಎರಡನೇ ಬಾರಿ ಬಿಜೆಪಿ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅನೇಕ ರಾಜ್ಯದ ಬಿಜೆಪಿ ಮುಖಂಡರು ಎಂಟಿಬಿ ಸಾಥ್ ನೀಡುವ ಸಾಧ್ಯತೆ ಇದೆ.
ಎಂಟಿಬಿ ನಾಮಪತ್ರ ಸಲ್ಲಿಸುತ್ತಿರುವ ಜೊತೆಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಹೊಸಕೋಟೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜೊತೆಗೆ ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ಕಾರ್ಯಕರ್ತರನ್ನು ಕರೆ ತರಲು ಖಾಸಾಗಿ ಬಸ್ ಗಳನ್ನು ಹಳ್ಳಿಹಳ್ಳಿಗೆ ನಾಗರಾಜ್ ಕಳುಹಿಸಿ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇಷ್ಟು ಮಾತ್ರವಲ್ಲ ಕಾರ್ಯಕರ್ತರಿಗೆ ಎಂಟಿಬಿ ಎಂದು ಮುದ್ರಿಸಿರುವ ಟೀ ಶರ್ಟ್ ವಿತರಣೆ ಮಾಡಲಾಗಿದೆ. ಟೀ ಶರ್ಟ್ ಹಿಂಬದಿಯಲ್ಲಿ ಅಭಿವೃದ್ದಿಗಾಗಿ ನಿಮ್ಮ ಮತ ಎಂದು ಬರೆಯಲಾಗಿದೆ.
ಇಂದು ನಾಮಪತ್ರ ಸಲ್ಲಿಸುತ್ತಿರುವುದರ ಜೊತೆಗೆ ಎಂಟಿಬಿ ನಾಗರಾಜ್ ಅವರು ಕಣ್ಣು ನೋವಿನಿಂದ ಬಳಲುತ್ತಿದ್ದು, ಹೊಸಕೋಟೆಯ ಜೆಇಎಫ್ ಕಣ್ಣಿನ ಆಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.