ರಷ್ಯಾ ನಿರ್ಮಿತ ಎಸ್-400 ಕ್ಷಿಪಣಿಗಳು ನಿರೀಕ್ಷೆಯಂತೆ ಭಾರತಕ್ಕೆ ಪೂರೈಕೆ

ಬ್ರಿಸಿಲಿಯಾ, ನ.15- ಭೂಮಿಯಿಂದ ಗಗನಕ್ಕೆ ಚಿಮ್ಮಿ ವೈರಿ ದೇಶಗಳ ಯುದ್ದ ವಿಮಾನಗಳು ಮತ್ತು ಹೆಲಿಕಾಪ್ಟರ್‍ಗಳನ್ನು ಧ್ವಂಸಗೊಳಿಸುವ ರಷ್ಯಾ ನಿರ್ಮಿತ ಎಸ್-400 ಕ್ಷಿಪಣಿಗಳು ನಿರೀಕ್ಷೆಯಂತೆ ಭಾರತಕ್ಕೆ ಪೂರೈಕೆಯಾಗಲಿವೆ.

ಬ್ರೆಜಿಲಿನ ಬ್ರೆಸಿಲಿಯಾ ನಗರದಲ್ಲಿ ನಡೆದ ಬ್ರಿಕ್ಸ್ ದೇಶಗಳ ವಾಣಿಜ್ಯ ಸಮಾವೇಶ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ ವಿಷಯ ತಿಳಿಸಿದರು.

ರಷ್ಯಾದಿಂದ ಭಾರತಕ್ಕೆ ಎಸ್-400 ಕ್ಷಿಪಣಿಗಳನ್ನು ಪೂರೈಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪೂರ್ವ ಯೋಜನೆಯಂತೆಯೇ ರಷ್ಯಾದಿಂದ ಭಾರತಕ್ಕೆ ಇವುಗಳನ್ನು ಸರಬರಾಜು ಮಾಡಲಾಗುತ್ತದೆ ಎಂದು ಪುಟಿನ್ ಹೇಳಿದರು.

ಬ್ರಿಕ್ಸ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈ ಸಂಬಂಧ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ರಷ್ಯಾದಿಂದ ಎಸ್-400 ಕ್ಷಿಪಣಿಗಳನ್ನು ಖರೀದಿಸುವ ಭಾರತದ ರಕ್ಷಣಾ ವ್ಯವಹಾರಗಳ ಮೇಲೆ ದಿಗ್ಬಂಧನ ಹೇರುವುದಾಗಿ ಅಮೆರಿಕ ಈ ಹಿಂದೆ ಹಲವು ಬಾರಿ ಬೆದರಿಕೆ ಹಾಕಿತ್ತು.

ಆದರೆ ಚೀನಾದ ರಕ್ಷಣಾ ಸಾಮಥ್ರ್ಯಕ್ಕೆ ಪ್ರತಿಯಾಗಿ ಭಾರತದ ಮಿಲಿಟರಿ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಎಸ್-400 ಕ್ಷಿಪಣಿಗಳು ಅಗತ್ಯವಾಗಿದೆ. ಹೀಗಾಗಿ ರಷ್ಯಾದಿಂದ ಅವುಗಳನ್ನು ಭಾರತ ಪಡೆಯಲಿದೆ ಎಂದು ಕೇಂದ್ರ ಸರ್ಕಾರ ಅಮೆರಿಕಾಗೆ ತಿರುಗೇಟು ನೀಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ