ಕಾಂಗ್ರೆಸ್ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಹುತೇಕ ಪೂರ್ಣ

ಬೆಂಗಳೂರು, ನ.15-ಸುಪ್ರೀಂಕೋರ್ಟ್ ತೀರ್ಪಿನ ನಂತರ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಮೂರೂ ಪಕ್ಷಗಳಲ್ಲಿ ಚುನಾವಣೆಯ ಕಾವೇರತೊಡಗಿದೆ.

ಕಾಂಗ್ರೆಸ್ ಪಕ್ಷ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಉಸ್ತುವಾರಿ ನಾಯಕರನ್ನು ನಿಯೋಜಿಸಲು ಪಟ್ಟಿ ಸಿದ್ಧಪಡಿಸಿದ್ದು, ಇಂದು ಅಥವಾ ನಾಳೆ ಉಸ್ತುವಾರಿಗಳು ಕ್ಷೇತ್ರಕ್ಕೆ ತೆರಳಿ ಚುನಾವಣಾ ಕಾರ್ಯದ ಕೆಲಸಗಳನ್ನು ಆರಂಭಿಸಲಿದ್ದಾರೆ.

ಕಾಗವಾಡ ಕ್ಷೇತ್ರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಅಥಣಿ ಕ್ಷೇತ್ರಕ್ಕೆ ಲಕ್ಷ್ಮೀಹೆಬ್ಬಾಳ್ಕರ್, ವಿಜಯನಗರ ಕ್ಷೇತ್ರಕ್ಕೆ ವಿ.ಎಸ್.ಉಗ್ರಪ್ಪ, ಹುಣಸೂರು ಕ್ಷೇತ್ರಕ್ಕೆ ಎಚ್.ಸಿ.ಮಹದೇವಪ್ಪ, ಹೊಸಕೋಟೆ ಕ್ಷೇತ್ರಕ್ಕೆ ಕೃಷ್ಣಭೆರೇಗೌಡ, ಕೆ.ಆರ್.ಪುರ ಕ್ಷೇತ್ರಕ್ಕೆ ಕೆ.ಜೆ.ಜಾರ್ಜ್, ಶಿವಾಜಿನಗರ ಕ್ಷೇತ್ರಕ್ಕೆ ಜಮೀರ್ ಅಹಮ್ಮದ್ ಖಾನ್, ಯಲ್ಲಾಪುರ ಕ್ಷೇತ್ರಕ್ಕೆ ಆರ್.ವಿ.ದೇಶಪಾಂಡೆ, ಮಹಾಲಕ್ಷ್ಮಿ ಲೇಔಟ್‍ಗೆ ಎಚ್.ಎಂ.ರೇವಣ್ಣ, ಗೋಕಾಕ್ ಕ್ಷೇತ್ರಕ್ಕೆ ಸತೀಶ್ ಜಾರಕಿ ಹೊಳಿ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಶಿವಶಂಕರ್‍ರೆಡ್ಡಿ ಅವರುಗಳನ್ನು ಉಸ್ತುವಾರಿ ನಾಯಕರನ್ನಾಗಿ ನಿಯೋಜಿಸಲಾಗುತ್ತಿದೆ.

ಜೊತೆಗೆ ಇಬ್ಬರು ಶಾಸಕರನ್ನು ಮತ್ತು ಒಬ್ಬರು ಹಿರಿಯ ನಾಯಕರನ್ನು ಕ್ಷೇತ್ರಗಳಿಗೆ ಉಸ್ತುವಾರಿಯನ್ನಾಗಿ ನೇಮಿಸಲಾಗುತ್ತದೆ. ಹಿರಿಯ ನಾಯಕರನ್ನು ಪ್ರಚಾರಕ್ಕೆ ಕರೆಸಿ ಎಲ್ಲಾ ಪ್ರಯತ್ನಗಳನ್ನು ಮಾಡಿ ಚುನಾವಣೆಯನ್ನು ಗೆಲ್ಲಿಸಿಕೊಂಡು ಬರುವಂತೆ ಉಸ್ತುವಾರಿಗಳಿಗೆ ಸೂಚನೆ ನೀಡಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ