ಪಾಕಿಸ್ತಾನದಲ್ಲಿ ಸರ್ಕಾರ-ಸೇನೆ ನಡುವೆ ಮೂಡಿದೆಯೇ ಭಿನ್ನಾಭಿಪ್ರಾಯ? ಇಲ್ಲಿದೆ ಸುಳಿವು!

ನವದೆಹಲಿ: ಪಾಕಿಸ್ತಾನದಲ್ಲಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಮತ್ತು ಪಾಕಿಸ್ತಾನದ ಸೇನಾಪಡೆಯ ನಡುವೆ ಎಲ್ಲವೂ ಸರಿಯಿಲ್ಲ ಎಂದು ಮೇಲ್ನೋಟಕ್ಕೆ ತೋರುತ್ತಿದೆ.

ವಾಸ್ತವವಾಗಿ, ಕರ್ತಾರ್‌ಪುರ ಕಾರಿಡಾರ್‌ನ ಉದ್ಘಾಟನಾ ಸಮಾರಂಭದಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರ ಅನುಪಸ್ಥಿತಿಯು ಇದೀಗ ಚರ್ಚೆಯ ವಿಷಯವಾಗಿದೆ. ಇದಕ್ಕೂ ಮೊದಲು ಜನರಲ್ ಬಜ್ವಾ ಅವರು ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರೊಂದಿಗೆ ಪೂರ್ಣ ಉತ್ಸಾಹದಿಂದ ಕಾರ್ತಾರ್‌ಪುರ ಕಾರಿಡಾರ್‌ಗೆ ಶಿಲಾನ್ಯಾಸ ಹಾಕುವ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವಿಷಯದಲ್ಲಿ ನಾಗರಿಕ ಸರ್ಕಾರ ಮತ್ತು ಪಾಕಿಸ್ತಾನ ಸರ್ಕಾರದ ನಡುವೆ ಸಂಪೂರ್ಣ ಸಿನರ್ಜಿ ಇದೆ ಎಂಬ ಸಂದೇಶವನ್ನು ನೀಡುವ ಪ್ರಯತ್ನ ಮಾಡಲಾಗಿದೆ ಎಂದು ಆ ಸಮಯದಲ್ಲಿ ಹೇಳಲಾಗಿತ್ತು. ಕರ್ತಾರ್‌ಪುರ ಕಾರಿಡಾರ್‌ನ ಉದ್ಘಾಟನಾ ಸಮಾರಂಭಕ್ಕೆ ಜನರಲ್ ಬಜ್ವಾ ಆಗಮಿಸಲಿಲ್ಲ ಎಂದು ಪಾಕಿಸ್ತಾನ ಪತ್ರಿಕೆ ‘ದಿ ನ್ಯೂಸ್’ ವರದಿ ತಿಳಿಸಿದೆ.

ಈ ವಿಷಯ ಇದೀಗ ಬಾರೀ ಚರ್ಚೆಗೆ ಗ್ರಾಸವಾಗಿದೆ. ಪಾಕಿಸ್ತಾನದ ಪ್ರಮುಖ ಜನರು ಮಾತ್ರವಲ್ಲದೆ, ಅಲ್ಲಿ ನೆರೆದಿದ್ದ ಭಕ್ತರೂ ಕೂಡಾ ಅವರು ಬಜ್ವಾ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಕಾತುರರಾಗಿದ್ದರು ಎನ್ನಲಾಗಿದೆ. ‘ಜನರಲ್ ಬಜ್ವಾ ಯಾವಾಗ ಬರುತ್ತಾರೆ’ ಎಂದು ಜನರು ನಿರಂತರವಾಗಿ ಕೇಳುತ್ತಿದ್ದರು. ಆದರೆ ಕಾರಿಡಾರ್ ಉದ್ಘಾಟನೆಗೆ ಸ್ವಲ್ಪ ಮುಂಚೆ, ಕರ್ತಾರ್‌ಪುರಕ್ಕೆ ಬರುವ ಭಾರತೀಯ ಯಾತ್ರಿಗಳಿಗೆ ಪಾಸ್‌ಪೋರ್ಟ್ ಕಡ್ಡಾಯ ಎಂದು ಸೇನೆಯು ಹೇಳಿದಾಗ ಸರ್ಕಾರ ಮತ್ತು ಸೇನೆಯ ನಡುವಿನ ಭಿನ್ನಾಭಿಪ್ರಾಯ ಬೆಳಕಿಗೆ ಬಂದಿದೆ. ಗಮನಾರ್ಹವಾಗಿ ಭಾರತೀಯ ಭಕ್ತರು ಪಾಸ್‌ಪೋರ್ಟ್ ಇಲ್ಲದೆ ಕಾರ್ತಾರ್‌ಪುರ ಕಾರಿಡಾರ್‌ಗೆ ಬರಬಹುದು ಎಂದು ಇಮ್ರಾನ್ ಮೊದಲೇ ಹೇಳಿದ್ದರು.

ಸೇನಾ ವಕ್ತಾರರ ಹೇಳಿಕೆಯ ನಂತರ, ಕಾರಿಡಾರ್ ಉದ್ಘಾಟನೆಯಲ್ಲಿ ಭಕ್ತರು ಪಾಸ್‌ಪೋರ್ಟ್ ಇಲ್ಲದೆ ಬರಲು ಸಾಧ್ಯವಾಗುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೇನೆಯು ಅತ್ಯಂತ ಶಕ್ತಿಶಾಲಿಯಾಗಿದೆ ಮತ್ತು ಇದು ಪಾಕ್ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಗಮನಿಸಬೇಕಾದ ಅಂಶ.

ಅಷ್ಟೇ ಅಲ್ಲ, ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರದ ಪ್ರಧಾನ ಮಂತ್ರಿಯೂ ಮಿಲಿಟರಿ ಶಕ್ತಿಯ ಮುಂದೆ ಕಡಿಮೆ ಶಕ್ತಿಶಾಲಿಯಾಗಿರುತ್ತಾರೆ. ಪಾಕಿಸ್ತಾನದ ಸೈನ್ಯವು ದೇಶದ 72 ವರ್ಷಗಳ ಇತಿಹಾಸದಲ್ಲಿ ಅರ್ಧದಷ್ಟು ಕಾಲ ಆಡಳಿತ ನಡೆಸಿದೆ. ಈ ಕಾರಣದಿಂದಾಗಿ ದಂಗೆಯ ಬಗ್ಗೆ ನಿರಂತರ ಭಯವಿದೆ. ಇಮ್ರಾನ್ ಖಾನ್ ಅವರ ನಿರ್ಧಾರದಿಂದ ಸೇನೆಯು ಅಸಮಾಧಾನ ಹೊಂದಿಲ್ಲ ಎಂದು ಊಹಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ