ಕರ್ಲಾನ್‍ನಿಂದ ಮೊದಲ ವಿವಾಹ ಮ್ಯಾಟ್ರೆಸ್ ಬಿಡುಗಡೆ

                                   – ತನ್ನ ಉತ್ಪನ್ನಗಳ ಶ್ರೇಣಿಯಲ್ಲಿ ವಿಸ್ತರಣೆ ಮುಂದುವರಿಸಿದ ಕುರ್ಲಾನ್
                                   – ಪ್ರೀಮಿಯಂ & ಲಕ್ಷುರಿ ವಿಭಾಗದಲ್ಲಿ ಭಾರತದ ಮೊದಲ ವಿವಾಹ ಮ್ಯಾಟ್ರೆಸ್ 

ಬೆಂಗಳೂರು, ನವೆಂಬರ್ 07, 2019: ಭಾರತದಲ್ಲಿ ಮುಂಚೂಣಿಯಲ್ಲಿರುವ ಮತ್ತು ಅತಿದೊಡ್ಡ ಮ್ಯಾಟ್ರೆಸ್, ಹೋಂ ಫರ್ನಿಚರ್ಸ್ ಮತ್ತು ಫರ್ನಿಶಿಂಗ್ ಬ್ರ್ಯಾಂಡ್ ಆಗಿರುವ ಕರ್ಲಾನ್ ಭಾರತದಲ್ಲಿ ಕ್ಷಿಪ್ರವಾಗಿ ಬೆಳೆಯುತ್ತಿರುವ ಮ್ಯಾಟ್ರೆಸ್ ಮಾರುಕಟ್ಟೆಯಲ್ಲಿ ದೇಶದಲ್ಲಿ ಇದೇ ಮೊದಲ ಬಾರಿಗೆ ವಿವಾಹ ಮ್ಯಾಟ್ರೆಸ್ ಬಿಡುಗಡೆಯೊಂದಿಗೆ ತನ್ನ ಜಾಲವನ್ನು ವಿಸ್ತರಣೆ ಮಾಡಿದೆ. ಈ ಬಿಡುಗಡೆ 50 ಬಿಲಿಯನ್ ಡಾಲರ್ (33,000 ಕೋಟಿ ರೂಪಾಯಿ) ವಿವಾಹ ಮಾರುಕಟ್ಟೆಗೆ ಪ್ರವೇಶ ಮಾಡಿದ್ದಷ್ಟೇ ಅಲ್ಲದೇ, ಸ್ಥಾಪಿತ ಮತ್ತು ಪ್ರೀಮಿಯಂ & ಲಕ್ಷುರಿ ವಿಭಾಗದ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ತನ್ನ ಜಾಲವನ್ನು ವಿಸ್ತರಣೆ ಮಾಡುವುದಾಗಿದೆ. ಈ ವಿಭಾಗಗಳು ಸುಮಾರು 23 ಬಿಲಿಯನ್ ಡಾಲರ್ (ಸುಮಾರು 15,000 ಕೋಟಿ ರೂಪಾಯಿಗಳು) ವಹಿವಾಟನ್ನು ಹೊಂದಿವೆ. ಸ್ಪ್ರಿಂಗ್‍ಏರ್‍ನ ಸಹಯೋಗದಲ್ಲಿ ಕುರ್ಲಾನ್ ಈ ವರ್ಷದ ಆರಂಭದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಕರ್ಲಾನ್‍ನ ಹೊಸ ವೆಡ್ಡಿಂಗ್ ಮ್ಯಾಟ್ರೆಸ್ ಬಿಡುಗಡೆಯೊಂದಿಗೆ ಕಂಪನಿಯು ಕಳೆದ ಎರಡು ವರ್ಷಗಳಲ್ಲಿ ತನ್ನ 5 ಬಗೆಯ ಮ್ಯಾಟ್ರೆಸ್‍ಗಳನ್ನು ಬಿಡುಗಡೆ ಮಾಡಿದಂತಾಗಿದೆ. ಮ್ಯಾಟ್ರೆಸ್ ಮತ್ತು ಹೋಂ ಫರ್ನಿಶಿಂಗ್ ವಿಭಾಗದಲ್ಲಿ 200 ಕ್ಕೂ ಹೆಚ್ಚು ಉತ್ಪನ್ನಗಳನ್ನು ಹೊಂದಿರುವ ಕುರ್ಲಾನ್ ಸದಾಕಾಲ ಹೊಸ ಹೊಸ ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ದಿಸೆಯಲ್ಲಿ ಬದ್ಧತೆಯನ್ನು ಪ್ರದರ್ಶಿಸುತ್ತಾ ಬರುತ್ತಿದೆ. ಈ ಮೂಲಕ ಹೊಸ ಪೀಳಿಗೆಯ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಮತ್ತು ಭಾರತದ ವೇಗವಾಗಿ ಬೆಳೆಯುತ್ತಿರುವ ಹೋಂ ಕಂಫರ್ಟ್ ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸುವುದನ್ನು ಪುನರುಚ್ಚರಿಸಿದೆ.

ಬೆಂಗಳೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕುರ್ಲಾನ್‍ನ ಅಧ್ಯಕ್ಷ & ವ್ಯವಸ್ಥಾಪಕ ನಿರ್ದೇಶಕ ಟಿ.ಸುಧಾಕರ್ ಪೈ ಅವರು, “ಕರ್ಲಾನ್ ನಾವೀನ್ಯತೆಗೆ ಸದಾ ಉತ್ಸಾಹ ತೋರುವ ಕಂಪನಿಯಾಗಿದೆ. ವಿವಾಹ ಕಾಲಕ್ಕೆಂದೇ ಇದೇ ಮೊದಲ ಬಾರಿಗೆ ಮ್ಯಾಟ್ರೆಸ್ ಅನ್ನು ಬಿಡುಗಡೆ ಮಾಡಿದ್ದು, ಇದು ನಮ್ಮ ನಾವೀನ್ಯತೆಯ ಪರಿಕಲ್ಪನೆಗೆ ಹಿಡಿದ ಕನ್ನಡಿಯಾಗಿದೆ. ಭಾರತೀಯ ವಿವಾಹಗಳು ತಮ್ಮದೇ ಆದ ಸಂಪ್ರದಾಯ, ಆಚರಣೆಗಳನ್ನು ಹೊಂದಿರುತ್ತವೆ. ನವ ವಿವಾಹಿತರಿಗೆ ಉಡುಗೊರೆಯನ್ನು ನೀಡುವುದು ಒಂದು ಸಂಪ್ರದಾಯವಾಗಿ ಬೆಳೆದಿದೆ. ಈ ಸಂಪ್ರದಾಯದಂತೆ ನೂತನ ವಧು-ವರರಿಗೆ ಏನನ್ನು ಗಿಫ್ಟ್ ಆಗಿ ಕೊಡಬೇಕೆಂಬ ಜಿಜ್ಞಾಸೆಯಲ್ಲಿ ಸಾಕಷ್ಟು ಜನರಿರುತ್ತಾರೆ. ಈ ಅಂತರವನ್ನು ಕಡಿಮೆ ಮಾಡಲೆಂದೇ ನಾವು ಮದುವೆ ಪರಿಕಲ್ಪನೆಯ ಮ್ಯಾಟ್ರೆಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದೇವೆ. ಈ ಮೂಲಕ ನವದಂಪತಿಗಳಿಗೆ ಕುರ್ಲಾನ್ ಮ್ಯಾಟ್ರೆಸ್ ಒಂದು ಉತ್ತಮ ಉಡುಗೊರೆಯಾಗಲಿದೆ. ಈ ಮೂಲಕ ಗ್ರಾಹಕರು ಏನಾದರೂ ಒಂದು ವಿನೂತನವಾದ ಉಡುಗೊರೆ ಕೊಡಬೇಕೆಂಬ ಇಚ್ಛೆ ಹೊಂದಿರುತ್ತಾರೆ. ಇಂತಹ ಗ್ರಾಹಕರು ತಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲೆಂದೇ ಈ ಹೊಸ ಮ್ಯಾಟ್ರೆಸ್ ಮಾರುಕಟ್ಟೆಗೆ ಬಂದಿದೆ” ಎಂದು ತಿಳಿಸಿದರು.

ಕರ್ಲಾನ್‍ನ ಮಾರುಕಟ್ಟೆ ಮುಖ್ಯಸ್ಥರಾದ ಪ್ರಶಾಂತ್ ದೇಶಪಾಂಡೆ ಅವರು ಮಾತನಾಡಿ, “ಮದುವೆಯ ಪರಿಕಲ್ಪನೆಯಲ್ಲಿ ಪರಿಚಯಿಸಲಾಗಿರುವ ಕುರ್ಲಾನ್ ಮ್ಯಾಟ್ರೆಸ್ ವಿಶೇಷವಾದ ಮ್ಯಾಟ್ರೆಸ್ ವಿಭಾಗದಲ್ಲಿ ಇದುವರೆಗೆ ಇದ್ದ ಅಂತರವನ್ನು ಭರ್ತಿ ಮಾಡುತ್ತದೆ. ಮ್ಯಾಟ್ರೆಸ್ ಆಫ್ ಇಂಡಿಯಾ ಎಂಬ ಹೆಸರನ್ನು ಗಳಿಸಿಕೊಂಡಿರುವ ಕರ್ಲಾನ್‍ನ ಬಲವನ್ನು ಈ ಹೊಸ ಮದುವೆ ಮ್ಯಾಟ್ರೆಸ್ ಹೆಚ್ಚಿಸುತ್ತದೆ ಮತ್ತು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಮ್ಯಾಟ್ರೆಸ್‍ಗಳನ್ನು ಬಿಡುಗಡೆ ಮಾಡಲು ಕಾರಣವಾಗುತ್ತದೆ’’ ಎಂದರು.

ಈ ಹೊಸ ಮ್ಯಾಟ್ರೆಸ್‍ಗಳು ಕಿಂಗ್ ಮತ್ತು ಕ್ವೀನ್ ಗಾತ್ರದಲ್ಲಿ ದೊರೆಯುತ್ತವೆ. ಈ ಹಾಸಿಗೆಯ ಬೆಲೆ 20,000 ರೂಪಾಯಿಯಿಂದ ಆರಂಭವಾಗುತ್ತದೆ. ಈ ಮದುವೆ ವಿಶೇಷತೆಯ ಹಾಸಿಗೆಯು ಬೆಂಗಳೂರು, ಹೈದ್ರಾಬಾದ್, ಕೊಚ್ಚಿನ್, ಮಂಗಳೂರು ಮತ್ತು ಮೈಸೂರಿನಲ್ಲಿರುವ ಕುರ್ಲಾನ್‍ನ ಹೋಂ ಕಂಫರ್ಟ್ ಸ್ಟೋರ್‍ಗಳಲ್ಲಿ ಲಭ್ಯವಿದೆ. ಅಲ್ಲದೇ, ಆನ್‍ಲೈನ್ https://www.kurlon.com/ ನಲ್ಲಿಯೂ ಲಭ್ಯವಿದೆ.

2018-19 ನೇ ಹಣಕಾಸು ಸಾಲಿನಲ್ಲಿ 1,050 ಕೋಟಿ ರೂಪಾಯಿಗಳ ಮಾರಾಟ ಆದಾಯವನ್ನು ಗಳಿಸಿದ್ದ ಕುರ್ಲಾನ್, 2019-20 ನೇ ಸಾಲಿನಲ್ಲಿ 1,200 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸುವ ಮೂಲಕ ದಾಖಲೆಯ ಶೇ.25 ರಷ್ಟು ಪ್ರಗತಿಯನ್ನು ಸಾಧಿಸಿದೆ. ಈ ವರ್ಷ ಕುರ್ಲಾನ್ ರೀಟೇಲ್ ವಿಸ್ತರಣೆ, ಹೊಸ ಉತ್ಪನ್ನಗಳ ಪರಿಚಯ, ಬ್ರ್ಯಾಂಡ್ ಪ್ರಮೋಶನ್ ಸೇರಿದಂತೆ ಹಲವಾರು ಉಪಕ್ರಮಗಳಿಗೆ ಆದ್ಯತೆ ನೀಡುತ್ತಿದೆ. ರೀಟೇಲ್ ವಿಸ್ತರಣೆಯಲ್ಲಿ ಕುರ್ಲಾನ್ ದೇಶಾದ್ಯಂತ ಹಾಲಿ ಇರುವ 100 ಸ್ಟೋರ್‍ಗಳಿಂದ 2020 ರ ಅಂತ್ಯದ ವೇಳೆಗೆ 250 ಸ್ಟೋರ್‍ಗಳಿಗೆ ಹೆಚ್ಚಿಸುವ ಯೋಜನೆಯನ್ನು ರೂಪಿಸಿದೆ.

ದೇಶದಲ್ಲಿ “ಯುಎಲ್ ಗ್ರೀನ್‍ಗಾರ್ಡ್ ಗೋಲ್ಡ್” ಪ್ರಮಾಣೀಕೃತವಾದ ಮೊದಲ ಮತ್ತು ಏಕೈಕ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಕರ್ಲಾನ್ ಪಾತ್ರವಾಗಿದೆ. ಕಡಿಮೆ ರಾಸಾಯನಿಕ ಹೊರಸೂಸುವುದು, ಗಾಳಿಯ ಗುಣಮಟ್ಟವನ್ನು ಸುಧಾರಣೆ ಮಾಡುವುದು ಸೇರಿದಂತೆ ಇನ್ನೂ ಹಲವಾರು ಪರಿಸರ ಸ್ನೇಹಿ ಕ್ರಮಗಳನ್ನು ತೆಗೆದುಕೊಂಡ ಬ್ರ್ಯಾಂಡ್‍ಗಳಿಗೆ ಈ ಗ್ರೀನ್‍ಗಾರ್ಡ್ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಇದು ಗ್ರಾಹಕರು ಅತ್ಯುತ್ತಮವಾದ ಉತ್ಪನ್ನವನ್ನು ಆಯ್ಕೆ ಮಾಡಿಕೊಳ್ಳಲು ನೆರವಾಗುತ್ತದೆ.

ಕರ್ಲಾನ್ ಕುರಿತು:
ಕರ್ಲಾನ್ ಭಾರತದಲ್ಲಿ ಮುಂಚೂಣಿಯಲ್ಲಿರುವ ಮತ್ತು ಅತಿದೊಡ್ಡ ಮ್ಯಾಟ್ರೆಸ್, ಹೋಂ ಫರ್ನಿಚರ್ಸ್ ಮತ್ತು ಫರ್ನಿಶಿಂಗ್ ಬ್ರ್ಯಾಂಡ್ ಆಗಿದೆ. ಭಾರತಾದ್ಯಂತ 7000 ಕ್ಕೂ ಅಧಿಕ ಮಲ್ಟಿಬ್ರ್ಯಾಂಡ್ ಔಟ್‍ಲೆಟ್‍ಗಳು, 1300 ಕ್ಕೂ ಅಧಿಕ ಫ್ರಾಂಚೈಸಿ ಔಟ್‍ಲೆಟ್‍ಗಳು ಮತ್ತು 100 ಕ್ಕೂ ಹೆಚ್ಚು ಎಕ್ಸ್‍ಕ್ಲೂಸಿವ್ ಬ್ರ್ಯಾಂಡ್ ಔಟ್‍ಲೆಟ್‍ಗಳಲ್ಲಿ ಕುರ್ಲಾನ್ ಬ್ರ್ಯಾಂಡ್‍ನ ಉತ್ಪನ್ನಗಳು ಲಭ್ಯವಿವೆ. ಇದಲ್ಲದೇ, ಕುರ್ಲಾನ್ ದೇಶಾದ್ಯಂತ 10,000 ಕ್ಕೂ ಅಧಿಕ ಡೀಲರ್‍ಗಳನ್ನು ಹೊಂದಿದ್ದು, 72 ಶಾಖೆಗಳು ಮತ್ತು ಸ್ಟಾಕ್ ಪಾಯಿಂಟ್‍ಗಳನ್ನು ಹೊಂದಿದೆ. ಪ್ರಮುಖವಾಗಿ ಕರ್ನಾಟಕ, ಒರಿಸ್ಸಾ, ಮಧ್ಯಪ್ರದೇಶ, ಉತ್ತರಾಂಚಲ್ ಮತ್ತು ಗುಜರಾತ್ ರಾಜ್ಯಗಳಲ್ಲಿ ತನ್ನ ವ್ಯಾಪ್ತಿಯನ್ನು ಬಲವರ್ಧನೆ ಮಾಡಿಕೊಂಡಿದೆ. ತನ್ನ ಅತ್ಯುನ್ನತ ತಂತ್ರಜ್ಞಾನದ ಮೂಲಕ ಕುರ್ಲಾನ್ ಭಾರತೀಯ ಗ್ರಾಹಕರ ಬದಲಾಗುತ್ತಿರುವ ಅಭಿರುಚಿಗೆ ತಕ್ಕಂತೆ ಭಾರತೀಯ ಮ್ಯಾಟ್ರೆಸ್ ಮತ್ತು ಫರ್ನಿಚರ್ ಉದ್ಯಮದಲ್ಲಿ ಗುಣಮಟ್ಟವನ್ನು ಸುಧಾರಣೆ ಮಾಡುತ್ತಿದೆ. ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ https://www.kurlon.com/ ಗೆ ಭೇಟಿ ನೀಡಿ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ